`ಪರಿಸರ ಸ್ನೇಹಿ ಗಣಪ’ ಮನೆಮನೆಯಲ್ಲಿಯೂ ಅಗತ್ಯ :ಅಭಿಜಿತ ಎ. ದೇಶಮುಖ

ಕಲಬುರಗಿ:ಸೆ.02:ನೂತನ ವಿದ್ಯಾಲಯ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ವಿಭಾಗವು ಏರ್ಪಡಿಸಿದ್ದ ಮೂರು ದಿನಗಳ ಪರಿಸರ ಸ್ನೇಹಿ ಗಣೇಶ ಕಾರ್ಯಾಗಾರ ಉದ್ಘಾಟಿಸಿ ಸಂಸ್ಥೆಯ ಕಾರ್ಯದರ್ಶಿ ಅಭಿಜಿತ ಎ. ದೇಶಮುಖ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಇಂದಿನ ದಿನಗಳಲ್ಲಿ ಧಾರ್ಮಿಕ ಆಚರಣೆಯೊಂದಿಗೆ `ಪರಿಸರ ಸ್ನೇಹಿ ಗಣಪ’ ಮನೆಮನೆಯಲ್ಲಿಯೂ ಅಗತ್ಯ’ವಿದೆ ಎಂದು ಹೇಳಿದರು.
ಶಿಲ್ಪ ಕಲಾವಿದ ಗೋಪಾಲ ಪಿ.ಕೆ.ಅವರನ್ನು ಸನ್ಮಾನಿಸಿದರು. ನಂತರ ಗೋಪಾಲ ಅವರು ಪರಿಸರ ಗಣಪತಿಯನ್ನು ಪ್ರಾತ್ಯಕ್ಷಿತೆ ನೀಡಿದರು. ಪ್ರಾಚಾರ್ಯರ ಡಾ.ಶ್ರೀಕಾಂತ ಎಸ್. ಏಖಳಿಕರ ಅವರು ಮಾತನಾಡುತ್ತಾ ಈ ತರಹದ ಕಾರ್ಯಾಗಾರದಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ಕೋರಿದರು. ಮಣ್ಣಿನ ಗಣಪನಿಂದ ನಮ್ಮ ಪರಿಸರದ ಸಂರಕ್ಷಣೆಯಲ್ಲಿ ತಮ್ಮ ಪಾಲನ್ನೂ ಸೇರಿಸಬೇಕೆಂದು ಅಭಿಪ್ರಾಯಪಟ್ಟರು.
ಉಪ ಪ್ರಾಚಾರ್ಯರ ಡಾ.ದಯಾನಂದ ಶಾಸ್ತ್ರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಚಿತ್ರಕಲಾ ವಿಭಾಗದ ಮುಖ್ಯಸ್ಥರಾದ ಜಿತೇಂದ್ರ ಕೊಥಳಿಕರ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ 50 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಸ್ವಾತಿ ಕುಲಕರ್ಣಿ ಪ್ರಾರ್ಥನಾ ಗೀತೆಯನ್ನು ಪ್ರಸ್ತುತ ಪಡಿಸಿದರು. ಹಾಗೂ ಉಪನ್ಯಾಸಕ ನಾಗರಾಜ ಕುಲಕರ್ಣಿ ವಂದಿಸಿದರು.