ಪರಿಸರ ಸಮತೋಲನಕ್ಕೆ ಕನಿಷ್ಠ ಮನೆಗೊಂದು ಮರ ನೇಡಲು ಸಲಹೆ

ಕಲಬುರಗಿ:ಆ.3: ಪ್ರತಿಯೊಬ್ಬರೂ ತಮಗೆ ಲಭ್ಯವಿರುವ ಸ್ಥಳದಲ್ಲಿ ಸಸಿ ನೆಟ್ಟು ಸಂರಕ್ಷಿಸಬೇಕು. ಗಿಡಮರಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಕನಿಷ್ಠ ಮನೆಗೊಂದು ಮರ ನೆಟ್ಟು ಬೆಳೆಸಲು ಮುಂದಾಗಬೇಕು ಎಂದು ಕ್ರೆಡಲ್ ನ ಮಾಜಿ ಅಧ್ಯಕ್ಷ ಚಂದು ಬಿ.ಪಾಟೀಲ ಸಲಹೆ ನೀಡಿದರು.
ನಗರದ ವಿಶ್ವೇಶ್ವರಯ್ಯಾ ಭವನದಲ್ಲಿ ಬುಧವಾರ ಜರುಗಿದ ಪರೋಪಕಾರಿ ನೀಲಕಂಠಪ್ಪ ಶೇರಿಕಾರ ಹಾಗೂ ಕಲಾವತಿ ಶೇರಿಕಾರ ಅವರ 75ನೇ ವರ್ಷದ ಜನ್ಮದಿನದ ಅಮೃತ ಮಹೋತ್ಸವ ಹಾಗೂ ಅವರ 55ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆ ಸಾಮಾಜಿಕ ಜಾಗೃತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಜಿ ಸಚಿವ ಎಸ್.ಕೆ.ಕಾಂತಾ ಮಾತನಾಡಿ, ಮನುಷ್ಯರು ಪರಿಸರದ ಜತೆಗೆ ನಾವು ಬದುಕಬೇಕಾಗಿದೆ. ನಮ್ಮ ಉಸಿರಿಗೆ ಆಹಾರ, ನಿರು, ಗಾಳಿ ಎಷ್ಟು ಅವಶ್ಯಕತೆಯಿದೆಯೋ ಪರಿಸರವನ್ನು ಬೆಳೆಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಹಾಗಾಗಿ ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವವ್ಯವಾಗಿದೆ ಎಂದರು.
ಪರೋಪಕಾರಿ ನೀಲಕಂಠಪ್ಪ ಶೇರಿಕಾರ, ಕಲಾವತಿ ಶೇರಿಕಾರ, ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ, ಗೌಡಪ್ಪ ಶೇರಿಕಾರ, ಪ್ರಮಖರಾದ ಕಲ್ಯಾಣಪ್ಪ ಪಾಟೀಲ ಮಳಖೇಡ,ಸಂಜೀವ ಗುಪ್ತಾ, ಶಿವರಾಜ ಅಂಡಗಿ, ವಿನೋದ ಜೇನವೇರಿ, ರಾಜೇಂದ್ರ ಮಾಡಬೂಳ, ಪ್ರಭುಲಿಂಗ ಮೂಲಗೆ, ಮಾಲಾ ಕಣ್ಣಿ, ಶಿವಾನಂದ ಪಾಟೀಲ ಅಷ್ಟಗಿ, ಉಮೇಶ ಪಾಟೀಲ, ಬಾಬುರಾವ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಬಂದ ಸರ್ವರಿಗೂ ಸಸಿಗಳನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು.