ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ

ವಿಜಯಪುರ,ಜೂ.7: ವಿಜಯಪುರ ಮಹಾನಗರದ ಹೊರ ವಲಯದಲ್ಲಿರುವ ಅರಕೇರಿ ಗ್ರಾಮದಲ್ಲಿರುವ ಇಂಡಿಯಾ ರಿಸರ್ವ ಬಟಾಲಿಯನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
“ಭೂಮಿ ಮರುಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ” ಎಂಬ ಘೋಷವಾಕ್ಯ ಪ್ರಮುಖ ಆಧಾರ ಸ್ಥಂಭವಾಗಿಟ್ಟುಕೊಂಡು,ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಐಆರ್‍ಬಿ ಕೆಎಸ್‍ಪಿಎಸ್ ಕಮಾಂಡೆಂಟ್ ಎನ್.ಬಿ. ಮೆಳ್ಳೆಗಟ್ಟಿ ಉದ್ಘಾಟಿಸಿ ಮಾತನಾಡಿ, ಜೈವಿಕ ವೈವಿಧ್ಯತೆ ಹಾಗೂ ನೈಸರ್ಗಿಕ ಆವಾಸ ಸ್ಥಾನಗಳನ್ನು ರಕ್ಷಿಸಲು ಮತ್ತು ಕ್ಷೀಣಿಸಿದ ಪರಿಸರ ವ್ಯವಸ್ಥೆಗಳನ್ನು ಪುನಃ ಸ್ಥಾಪಿಸಲು ಸಾಮೂಹಿಕ ಪ್ರಯತ್ನ ಮಾಡಲು ಕರೆ ನೀಡಿದರು.
ಪರಿಸರ ವ್ಯವಸ್ಥೆಯ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಹವಾಮಾನ ಬದಲಾವಣೆಯಿಂದ ನಾವು ವ್ಯಾಪಕವಾದ ಪರಿಸರ ಸವಾಲುಗಳನ್ನು ಎದುರಿಸಬಹುದು. ಅದ್ದರಿಂದ ಎಲ್ಲರೂ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ನಾವೆಲ್ಲರೂ ಪಾತ್ರವಹಿಸಬೇಕಾಗಿದೆ. ನಮ್ಮ ಉಸಿರಿಗಾಗಿ ಹಸಿರನ್ನು ಬೆಳೆಸೋಣ ಪ್ರತಿಯೊಬ್ಬರು ಸಸಿನೆಟ್ಟು ಮರಗಳನ್ನು ಬೆಳೆಸೋಣ. ಈ ಭೂಮಿಯನ್ನು ಹಸಿರುಮಯ ಗೊಳಿಸೋಣ ಎಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಭೀಮಪ್ಪ ಎ. ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಭೂಮಿಯ ಮೇಲಿನ ಜೀವಿಗಳನ್ನು ಉಳಿಸಿಕೊಳ್ಳಲು ಅಗತ್ಯವಾದ ಪರಿಸರ ವ್ಯವಸ್ಥೆಯನ್ನು ರಕ್ಷಿಸಿ ಸಮತೋಲನ ಕಾಪಾಡಿಕೊಳ್ಳಲು ಜೈವಿಕ ಗೊಬ್ಬರ, ನೀರಿನ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯ ಉಂಟು ಮಾಡುವ ವಾಹನಗಳನ್ನು ನಿಯಂತ್ರಣ ಮಾಡಿ, ಮಾಲಿನ್ಯ ಉಂಟು ಮಾಡುವ ಅನಿಲಗಳನ್ನು ನಿಯಂತ್ರಿಸಿ ಹಸಿರುಮನೆ ಪರಿಣಾಮದಿಂದ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡಿ, ಜೀವ ಭೂಮಿಯನ್ನು ಹಸಿರುಗೊಳಿಸಿ ಮುಂದಿನ ಪೀಳಿಗೆಗೆ ಜವಾಬ್ಧಾರಿಯುತ ಕರ್ತವ್ಯ ನಿರ್ವಹಿಸೋಣ ಎಂದು ಹೇಳಿದರು.
ಐಆರ್‍ಬಿ ಸಹಾಯಕ ಕಮಾಂಡೆಂಟ್ ಶರಣಬಸವ, ಜಲಾನಯನ ಇಲಾಖೆ ಆರ್‍ಎಫ್‍ಒ ಪ್ರಭುಲಿಂಗ ಭುಯ್ಯಾರ ಮತ್ತು ಅರಣ್ಯ ಇಲಾಖೆ ಆರ್‍ಎಫ್‍ಒ ಗಿರೀಶ ಹುಲಕಟ್ಟಿ, ಐ.ಆರ್.ಬಿ. ಪೆÇಲೀಸ್ ಪಡೆಯ ಇನ್ಸಪೆಕ್ಟರ್ ದರ್ಜೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ, ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.