ಪರಿಸರ ಸಂರಕ್ಷಣೆ ನಮ್ಮ ಹೊಣೆ-ಸರಿತಾ

ಆನೇಕಲ್,ಜು೨೩:ಪರಿಸರ ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿಯಾಗಿದ್ದು, ಪ್ರತಿಯೊಬ್ಬರು ಸಹ ಎರಡು ಗಿಡಗಳನ್ನು ನೆಟ್ಟು ಅದನ್ನು ಪೋಷಣೆ ಮಾಡಬೇಕು ಎಂದು ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ವೆಂಕಟಸ್ವಾಮಿರವರು ತಿಳಿಸಿದರು.
ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಾಪುರ ಗ್ರಾಮದಲ್ಲಿ ಟಾಟಾ ಪವರ್ ಸೋಲಾರ್ ಸಿಸ್ಟಮ್ ಕಂಪನಿ ಮತ್ತು ಮರಸೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸುಮಾರು ೫೦೦ ಗಿಡ ನೆಡುವ ಕಾರ್ಯಕ್ರಮಕಕ್ಕೆ ಚಾಲನೆ ನೀಡಿ ಮಾತನಾಡಿದರು. ಈವತ್ತಿನ ದಿನಗಳಲ್ಲಿ ಪರಿಸರ ಮಲಿನವಾಗುತ್ತಿದೆ ಜನರಿಗೆ ಸರಿಯಾದ ಆಕ್ಸಿ ಜನ್ ದೊರೆಯುತ್ತಿಲ್ಲ, ಜೊತೆಗೆ ಕಾಡುಗಳೆಲ್ಲಾ ಕಾಂಕ್ರೀಟ್ ನಾಡುಗಳಾಗುತ್ತಿದ್ದು, ಈಗೆ ಮುಂದು ವರೆದರೆ ಮನುಷ್ಯ ಸಂಕುಲನ ನಶಿಸಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು ಪರಿಸರ ಉಳಿಸುವ ನಿಟ್ಟಿನಲ್ಲಿ ಕಾಯ್ಯೋನ್ಮುಖರಾಗೋಣ ಎಂದು ಹೇಳಿದರು.
ವಿಶೇಷವಾಗಿ ಟಾಟಾ ಪವರ್ ಸೋಲಾರ್ ಸಿಸ್ಟನ್ ಕಂಪನಿಯು ಪರಿಸರ ಸಂರಕ್ಷಣೆ, ಆರೋಗ್ಯ, ಗುಡಿ ಕೈಗಾರಿಕೆಗಳ ಅಭಿವೃದ್ದಿಗೆ ಸಂಬಂದಿಸಿದ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಮರಸೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಪಂಚಾಯಿತಿ ಸದಸ್ಯೆ ಸುಧಾ ಮುರಳಿ, ಪಿಡಿಓ ಮುರಳಿ. ಟಾಟಾ ಪವರ್ ಸೋಲಾರ್ ಕಂಪನಿ ಶ್ರೀನಾಥ್, ಶಾಮ್ ರಾಜ್, ಶಶಿಕುಮಾರ್, ಪಣಿ ರಾಮಚಂದ್ರ, ಮುರಳಿ, ಹೆಚ್.ಸಿ.ಶ್ರೀನಿವಾಸ್ ಮತ್ತು ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.