ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ:ಶ್ರೀದೇವಿ ಆರ್ ನಾಯಕ


ಅರಕೇರಾ.ಜೂ.೦೬-ದೇವದುರ್ಗ ತಾಲ್ಲೂಕಿನ ವಿವಿಧಗ್ರಾಮಗಳಲ್ಲಿ ಹಾಗೂ ಸರಕಾರಿ ಶಾಲೆಗಳಲ್ಲಿ ಸುಮಾರು ೩೦೦೦ಸಾವಿರ ಸಸಿಗಳನ್ನು ನೆಡುವ ಗುರಿಯನ್ನು ಹೊಂದಲಾಗಿದ್ದು ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಸಸಿನೆಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಬಿಸಲಾಗಿದೆಂದು ಶ್ರೀದೇವಿ ಆರ್ ನಾಯಾಕ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಇವರು ಹೇಳಿದರು.
ಅವರು ಮಲ್ಲೇದೇವರಗುಡ್ಡಗ್ರಾಮದಲ್ಲಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲೇದೇವರಗುಡ್ಡ ಎ.ವಿ.ನಾಯಕ ಕಾಲೋನಿಯಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾವು ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದುಹಾಕುತ್ತಿರುವದರಿಂದ ಇದರಿಂದಾಗಿ ಹಸಿರು ವಿರಳವಾಗುತ್ತಹೋಗುತ್ತಿದೆ ಈಗಲೇ ಎಚ್ಚೆತ್ತುಕೊಳ್ಳದ್ದಿದರೆ ಮುಂದೆ ತೊಂದರೆ ಅನುಭವಿಸುವಂತಾಗುತ್ತದೆ ಆದುದರಿಂದಲ್ಲೇ ಈ ಪರಿಸರ ಉಳಿಯಬೇಕಾದರೆ ಇಂದಿನ ದಿನದಿಂದಲ್ಲೇ ಒಳ್ಳೆಯ ಬದಲಾವಣೆ ಮಾಡುವ ಸಲುವಾಗಿ ತಾಲ್ಲೂಕಿನಾದ್ಯಂತ ಗ್ರಾಮದಲ್ಲಿ ಹಾಗೂ ಶಾಲೆಗಲ್ಲಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಗುರಿಯನ್ನು ಹೊಂದಿರುವುದಾಗಿ ಹಾಗೂ ತಾಲ್ಲೂಕಿನ ಐದು ಶಾಲೆಗಳನ್ನು ದತ್ತು ಪಡೆದಿರುವ ಶಾಲೆಗಳಾದ ಮಲ್ಲೇದೇವರಗುಡ್ಡ, ಬುಂಕಲದೊಡ್ಡಿ, ಗೂಗಲ್ ,ಮರಡಿತಾಂಡ,ಮಲ್ಲೇನಾಯಕನದೊಡ್ಡಿ ಈ ಶಾಲೆಗಳಲ್ಲಿ ತಲಾ ೨೦ ಸಸಿಗಳನ್ನು ನೆಟ್ಟು ಅವುಗಳ ಪೋಷಣೆಯ ಜವಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆಂದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸವರಾಜನಾಯಕ ಉಪಾಧ್ಯಕ್ಷರಾದ ಬಾಲಮ್ಮ ಸದಸ್ಯರುಗಳಾದ ಅಮರೇಶಚವ್ಹಾಣ ಗೋವಿಂದಪ್ಪ,ಪಂಪನಗೌಡ ರಕ್ಷಣವೇದಿಕೆಯ ತಾಲ್ಲೂಕಾ ಅಧ್ಯಕ್ಷರಾದ ವೆಂಕಟೇಶಗುತ್ತೇದಾರ ಮಹೇಶಸ್ವಾಮಿ ಜಾಗಟಗಲ್ ಅಭಿಷೇಕಪೂಜಾರ, ರಫಿ, ವಿಶ್ವರಾದ್ಯನಾಯಕ, ಲಿಂಗಣ್ಣ ಹವಲ್ದಾರ ಹಾಗೂ ಅಭಿಮಾನಿಗಳು ಗ್ರಾಮಸ್ಥರು ಉಪಸ್ಥಿತರರಿದ್ದರು.