ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ರಾಯಚೂರು.ಜೂ.೦೮-ನೈಸರ್ಗಿಕವಾಗಿ ಲಭಿಸುವ ಎಲ್ಲ ಸಂಪನ್ಮೂಲಗಳನ್ನು ಸಂರಕ್ಷಿಸಿ ಕಾಪಾಡಿ, ಮುಂದಿನ ಪಿಳಿಗೆಗೆ ದೊರಕುವಂತೆ ಮಾಡುವುದು ಎಲ್ಲರ ಜವಾಬ್ದಾರಿ ಎಂದು ನಿಸರ್ಗ ವಿವಿಧೋದ್ದೇಶ ಸೌಹರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಶೈಲಜಾ ಅಮರೇಶ ರಾಯಕೋಟಿ ಹೇಳಿದರು.
ನಗರದ ನಿಸರ್ಗ ವಿವಿಧೋದ್ದೇಶ ಸೌಹರ್ದ ಸಹಕಾರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಿ ಪ್ರತಿಯೊಬ್ಬರಿಗೂ ಸಸಿ ನೆಡುವಂತೆ ಪ್ರೇರೆಪಿಸಿ ವಿತರಿಸಲಾಯಿತು.
ಪ್ರಾಸ್ತವಿಕವಾಗಿ ಪ್ರಾಚಾರ್ಯರಾದ ಡಾ.ಬಾಬುರಾವ್ ಶೇಗುಣಿಸಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ಮೃತ್ಯುಂಜಯ, ಬ್ಯಾಂಕ್ ನಿರ್ದೇಕರಾದ ಕೆ.ರಾಮು, ವೆಂಕಣ್ಣ ಪದ್ಮಜಾ, ಶೈಲಜಾ ಕಲ್ಲೂರ, ಉಮೇಶ ಚಂದನಕೇರಿ, ಬಸವರಾಜ, ಗದಗಿನ ಶೋಭಾ ವಂದಿಸಿದರು. ಅತಿಥಿಗಳಾಗಿ ಆರ್.ಡಿ.ಸಿ.ಸಿ ವ್ಯವಸ್ಥಾಪಕರಾದ ಅಮರೇಶ ರಾಯಕೋಟಿ ಆಗಮಿಸಿದ್ದು, ಸುಮಾರು ೫೦ ಜನರ ಸಂಕ್ಷಿಪ್ತ ಕಾರ್ಯವು ನಿರ್ವಹಿಸಲಾಯಿತು.