ಪರಿಸರ ಸಂರಕ್ಷಣೆ ಜವಬ್ದಾರಿ ಮನೆಯಿಂದಲೇ ಆರಂಭವಾಗಬೇಕು

ಬೀದರ್:ಜೂ.6: ವಿದ್ಯಾನಗರ ಬಡಾವಣೆಯಲ್ಲಿ ಸಸಿ ನೆಟ್ಟು ಪರಿಸರ ದಿನ ಆಚರಿಸಲಾಯಿತು. ಮದುವೆ, ವಿವಾಹ ವಾರ್ಷಿಕೋತ್ಸವಗಳು ಹಾಗೂ ಜನ್ಮದಿನಾಚರಣೆ ಸಂದರ್ಭದಲ್ಲಿ ಲಕ್ಷಾಂತರ ಹಣ ವ್ಯಯ ಮಾಡುವ ಬದಲು ಪರಿಸರ ಸಮತೋಲನ ಕಾಪಾಡಲು ಎಲ್ಲೆಡೆ ಗಿಡ, ಮರಗಳನ್ನು ಬೆಳೆಸಬೇಕು ಎಂದು ಮಾಜಿ ನಗರ ಸಭೆ ಸದಸ ಕಲ್ಯಾಣರಾವ ಬೀರಾದ ಹೇಳಿದರು.ವಿದ್ಯಾನಗರ ಬಡಾವಣೆಯ ಮನೆಯ ಮುಂಭಾಗದಲ್ಲಿ ಸೋಮವಾರ ದಂದು ಶ್ರೀಕಾಂತ ಪಾಟೀಲ ಹಾಗೂ ಪೂಜಾ ಪಾಟೀಲ ಅವರ ಆರನೆಯ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದರು. ಪರಿಸರ ಸಂರಕ್ಷಣೆಯ ಜವಬ್ದಾರಿ ಮನೆಯಿಂದಲೇ ಆರಂಭವಾಗಬೇಕು,ಪರಿಸರ ರಕ್ಷಣೆ ಕೇವಲ ಆಚರಣೆಗೆ ಸೀಮಿತವಾಗದೆ, ವ್ಯಕ್ತಿಗತ ಆಚರಣೆಯಾದಗ ಮಾತ್ರ ನಿರೀಕ್ಷಿತ ಪರಿಣಾಮ ಸಾಧ್ಯ ಎಂದರು.
ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ ಮಾತನಾಡಿ, ಪರಿಸರ ಶುಚಿಯಾಗಿದ್ದರೆ ಭವಿಷ್ಯದ ಗಂಡಾಂ ತರಗಳಿಂದ ಈ ದೇಶವನ್ನು ರಕ್ಷಿಸಬಹುದು. ಕೋಡ್‍ನಂತಹ ರೋಗಗಳಿಗೆ ಎμÉ್ಟೂೀ ಸಸಿಗಳೇ ರಾಮಬಾಣವಾಗಿರುವುದರಿಂದ ಅನೇಕ ವನಸ್ಪತಿಯ ಸಸಿಗಳನ್ನು ನೆಟ್ಟು ಪರಿಸರ ಪ್ರೇಮಿಯಾಗಿ ಗುರುತಿ ಸಿಕೊಳ್ಳುವಂತೆ ಕರೆ ನೀಡಿದರು,
ಈ ಸಂದರ್ಭದಲ್ಲಿ ಜೈಶ್ರೀರಾಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ. ಚಂದ್ರಶೇಖರ ಪೆÇೀಲಿಸ್, ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷ ಶಿವಾನಂದ್ ವಿಶ್ವಕರ್ಮ ಪ್ರಭು ಆಲೊರೆ, ಪ್ರಭಾಕರ, ಮಹೇಶ ಎಖ್ಖೆಳಿಕರ್, ಪ್ರಗತಿ ಮೇಡಿಕಲ ಮಾಲಿಕಾರಾದ ರಾಜಕುಮಾರ,ಬಾಬುರಾವ ಸಂಗೊಳಗಿ , ನಾಗೇಂದ್ರರೆಡ್ಡಿ, ಸಾಯಿನಾಥ್ ಇದ್ದರು