ಪರಿಸರ ಸಂರಕ್ಷಣೆ ಅತ್ಯಗತ್ಯ

ಗದಗ,ಜೂ6: ಮಾನವ ಸಂಕುಲದ ಉಳಿವಿಗೋಸ್ಕರ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ ಅಭಿಪ್ರಾಯಪಟ್ಟರು.

ನರಗುಂದ ತಾಲೂಕಿನ ಕನಕೀಕೊಪ್ಪ ಗ್ರಾಮ ಪಂಚಾಯತಿಯ ಗುರ್ಲಕಟ್ಟಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನರೇಗಾ ಯೋಜನೆಯ ಅಮೃತ ಸರೋವರ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಿದ ಗ್ರಾಮದ ಕೆರೆಯ ದಂಡೆ ಮೇಲೆ ಹಮ್ಮಿಕೊಂಡ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜೂನ್ 5 ಒಂದೇ ದಿನ ಪರಿಸರ ದಿನಾಚರಣೆ ಕಾರ್ಯಕ್ರಮ ಜಾಗೃತಿ ಆಗಬಾರದು. ನಾವೆಲ್ಲ ಸೇರಿ ವಿವಿಧ ಸಸಿಗಳನ್ನು ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ನಡೆಸಿ ರಕ್ಷಿಸುವುದರ ಮೂಲಕ ವರ್ಷವೀಡಿ ಪರಿಸರ ದಿನಾಚರಣೆ ನಡೆಸುವಂತಾಗಬೇಕು. ಪರಿಸರ ಸಂರಕ್ಷಣೆಯಿಂದ ಪರಿಸರದಲ್ಲಿ ವ್ಯತ್ಯಾಸವಾಗುತ್ತಿರುವ ವಾತಾವರಣವನ್ನು ಸಮತೋಲನಗೊಳಿಸಬಹುದು. ಪರಿಸರ ರಕ್ಷಣೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಪರಿಸರ ರಕ್ಷಣೆ ಬಗ್ಗೆ ಕಾಳಜಿವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಶ್ರೀಮತಿ ಕೃಷ್ಣಮ್ಮ ಹಾದಿಮನಿ ಮಾತನಾಡಿ ಪರಿಸರ ಸಂರಕ್ಷಣೆಯಾದಾಗ ಮಾತ್ರ ಮಳೆ, ಬೆಳೆ ಎಲ್ಲವೂ ಸಾಧ್ಯ. ಸುತ್ತಮುತ್ತಲಿನ ಗಿಡಗಳನ್ನು ಕಡಿದು ಹಾಕುವುದರಿಂದ ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಂಡಂತೆ. ಹೀಗಾಗಿ ಮನೆ ಸುತ್ತ-ಮುತ್ತ ಖಾಲಿಯಿರುವ ಸ್ಥಳದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಉಳಿಸೋಣ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ನರೇಗಾ ಸಿಬ್ಬಂದಿ ಸುರೇಶ್ ಬಾಳಿಕಾಯಿ, ಅಲ್ತಾಪ ಅಮ್ಮೀನಬಾವಿ, ಬಸವರಾಜ ಚಿಮ್ಮನಕಟ್ಟಿ, ಗ್ರಾಮದ ನರೇಗಾ ಕೂಲಿಕಾರರು ಮತ್ತು ಕಣಕೀಕೊಪ್ಪ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಜರಿದ್ದರು.