ಪರಿಸರ ಸಂರಕ್ಷಣೆಯ ಜವಬ್ದಾರಿ ನಮ್ಮೆಲ್ಲರದು: ಸಾಯಪ್ಪ

ಸೈದಾಪುರ:ಮಾ.28:ಪರಿಸರ ಸಂರಕ್ಷಣೆ ನಮ್ಮೇಲ್ಲರ ಜವಬ್ದಾರಿಯಾಗಿದ್ದೂ, ಈ ದಿಸೆಯಲ್ಲಿ ನಾವು ಪ್ರಯತ್ನ ಮಾಡಿದಾಗ ಮಾತ್ರ ಸುಂದರ ಪ್ರಕೃತಿ ಕಾಣಲು ಸಾಧ್ಯವಿದೆ ಎಂದು ಮುಖ್ಯಗುರು ಸಾಯಪ್ಪ ಮುನಿ ಹೇಳಿದರು.
ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ ವತಿಯಿಂದ ಹಮ್ಮಿಕೊಂಡ ಸುಂದರ ಪ್ರಕೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಜೀವನ ವಿಧಾನಗಳು ಪ್ರಕೃತಿ ಮೇಲೆ ಪರಿಣಾಮ ಬೀರಿ ಆರೋಗ್ಯಕರ ವಾತವರಣ ಇಲ್ಲದೆ ವಿವಿಧ ರೋಗಗಳಿಗೆ ಭಾಜಿನರಾಗುತ್ತಿದ್ದೇವೆ. ಪರಿಸರದ ಬಗಗೆ ಜಾಗೃತಿ ಮೂಡಿಸಿ ಸಸಿಗಳನ್ನು ನೆಡುವ ಕೆಲಸ ಮಾಡಿದಾಗ ಮಾತ್ರ ಉತ್ತಮ ಬದುಕು ನಮ್ಮದಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ ಉಪನ್ಯಾಸಕ ಹಣಮರೆಡ್ಡಿ ಮೋಟ್ನಳ್ಳಿ, ಪ್ರೌಢ ಶಾಲಾ ಶಿಕ್ಷಕರಾದ ಹೊನ್ನಪ್ಪ, ವೆಂಕಟರೆಡ್ಡಿ, ಶಾಲಾ ಶಿಕ್ಷಕರಾದ ಪರಜಾನ ಬಾನು, ಮುತ್ತಪ್ಪ ಪೂಜಾರಿ, ಆರತಿ ಕುಲ್ಕರ್ಣಿ ಸೇರಿದಂತೆ ಇತರರಿದ್ದರು. ಶಿಕ್ಷಕ ಷಣ್ಮೂಕ ಸ್ವಾಗತಿಸಿದರು. ನಿರ್ಮಲ ವಂದಿಸಿದರು.