ಪರಿಸರ ಸಂರಕ್ಷಣೆಯಿಂದ ಜೀವ ಸಂಕಲದ ಉಳಿವು


ಗುಳೇದಗುಡ್ಡ,ಎ.21: ಸದೃಢ ಸಮಾಜ ನಿರ್ಮಾಣಕ್ಕೆ ಆರೋಗ್ಯ ಮುಖ್ಯ. ಎಲ್ಲರೂ ಆರೋಗ್ಯದಿಂದ ಬದುಕಬೇಕಾದರೆ ಭೂಮಿ ಮತ್ತು ಪರಿಸರವನ್ನು ಸಂರಕ್ಷಿಸಿದರೆ ಜೀವ ಸಂಕುಲ ಉಳಿಯುತ್ತದೆ. ಹೆಚ್ಚು ಗಿಡಗಳನ್ನು ಬೆಳೆಸುವುದರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಹೊಂದಲು ಸಾಧ್ಯವಾಗಲಿದೆ. ಪ್ರತಿಯೊಬ್ಬರು ಕಾನೂನು ಬಗ್ಗೆ ತಿಳಿದು ಕೊಳ್ಳಬೇಕೆಂದು ಜೆ.ಎಂ.ಎಫ್.ಸಿ ಹೆಚ್ಚುವರಿ ನ್ಯಾಯಧೀಶರು ಶುಷ್ಮ ಟಿ.ಸಿ. ಹೇಳಿದರು.
ಅವರು ಮಂಗಳವಾರ ಸಂಕನೂರ ಪದವಿ ಕಾಲೇಜಿನಲ್ಲಿ ತಾಲ್ಲೂಕ ಕಾನೂನು ಸೇವಾ ಸಮಿತಿ, ಗುಳೇದಗುಡ್ಡ ವಕೀಲರ ಸಂಘ ಹಾಗೂ ಸಂಕನೂರ ಪದವಿ ಕಾಲೇಜ್ ಆಶ್ರಯದಲ್ಲಿ “ಭೂ ದಿನಾಚ ರಣೆ’ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಗೀತಾ ಎಸ್. ಕೊರ್ತಿ ಮಾತನಾಡಿ. ನಾವು ಹುಟ್ಟು ಹಬ್ಬದ ಆಚರಣೆಗೆ ಸಾಕಷ್ಟು ದುಂದು ವೆಚ್ಚ ಮಾಡುತ್ತೇವೆ. ಭೂಮಿ ನಂದನವನ ವಾಗಬೇಕಾದರೆ ಹೆಚ್ಚು ಗಿಡಗಳನ್ನು ನೆಡಬೇಕು. ಪರಿಸರ ಸಂರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಗಂಗಾಧರ ಎಸ್. ರಾಂಪೂರ, ಸಂಘದ ಕಾರ್ಯದರ್ಶಿ ಎಸ್.ವೈ. ಹೊಸಮನಿ ಮಾತನಾಡಿ. ಭೂಮಿಯನ್ನು ಹಾಳು ಮಾಡಬಾರದು. ಅದನ್ನು ಪ್ರೀತಿಸಬೇಕು. ಪರಿಸರ ಸಂರಕ್ಷಣೆಗೆ ಯುವಕರಲ್ಲಿ ಜಾಗೃತಿ ಮೂಡಿ ಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಸಂಕನೂರ ಪದವಿ ಕಾಲೇಜಿನ ಪ್ರಾಚಾರ್ಯ ಬಿ.ಎಂ. ಸಂಕನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ವಕೀಲರು ಕೆ.ಟಿ. ಪವಾರ, ಸರ್ಕಾರಿ ಅಭಿಯೋಜಕರು ಸುರೇಶಗೌಡ ಆರ್. ಪಾಟೀಲ, ಶಕೀಲ ಕಾಂಟ್ರಾಕ್ಟರ್, ಕೆ.ಆರ್. ರಾಯಚೂರ, ಜಾರ್ಜ. ಐ. ಮೇಟಿ, ಜಿ.ಬಿ. ತೋಳಮಟ್ಟಿ, ಪುಂಡಲೀಕ ಆರ್. ಬಡಿಗೇರ ಹಾಗೂ ಉಪನ್ಯಾಕರು ಸರಿತಾ ಚಂದನ್ನವರ, ವಸಂತ ಪಂಚಪೂತ್ರರು, ಪೂಜಾ ಮಾದರ, ಮಲ್ಲಪ್ಪ ಕುಂಬಾರ ಇತರರು ಇದ್ದರು. ಗೋಪಾಲ ಕುಲಕರ್ಣಿ ಸ್ವಾಗತಿಸಿ ವಂದಿಸಿದರು.