ಪರಿಸರ ಸಂರಕ್ಷಣೆಗೆ ಮುಂದಾಗಿ : ದರ್ಬಾರೆ

ಔರಾದ್:ಜೂ.7: ಪಟ್ಟಣದ ವಾರ್ಡ ಸಂಖ್ಯೆ 13ರ ಆದರ್ಶ ಕಾಲೋನಿಯಲ್ಲಿರುವ ಉದ್ಯಾನದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಪಟ್ಟಣ ಪಂಚಾಯತ ಸದಸ್ಯ ಬಂಟಿ ದರ್ಬಾರೆ ನೇತೃತ್ವದಲ್ಲಿ ವಿವಧ ರೀತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರ್ಬಾರೆ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನಾವು ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ ಪರಿಸರ ದಿನ ಗಿಡ ನೆಟ್ಟು ಬಿಟ್ಟರೆ ಆಗದು ಅದು ದಿನನಿತ್ಯ ಪರಿಸರ ಕಾಪಾಡುವುದಾಗಿದೆ, ನಮ್ಮ ವಾರ್ಡನಲ್ಲಿ ಮನೆಗೊಂದು ಮರ ನೆಡಬೇಕು ವಾರ್ಡ್ಲ್ಲಿರುವ ಉದ್ಯಾನ ಮಾದರಿಯಾಗಿ ಮಾಡಲಾಗುವುದು ಎಂದು ತಿಳಿಸಿದರು.

ರತ್ನದೀಪ ಕಸ್ತೂರೆರವರು ಮಾತನಾಡುತ್ತ ನಾವು ಪರಿಸರವನ್ನು ರಕ್ಷಿಸಿದಾಗ ಮಾತ್ರ ಪರಿಸರ ನಾವು ಉಳಿಯಲು ಸಾಧ್ಯ ಈ ಕೋರೋನ ಮಹಾಮಾರಿ ದಿನದಿಂದಕ್ಕೆ ಹೆಚ್ಚುತ್ತಿದ್ದು ಆಕ್ಸಿಜನ ಕೊರತೆಯಿಂದ ಎಷ್ಟೋ ಜೀವಗಳು ಸಾವನ್ನಪ್ಪಿದ್ದಾರೆ, ಈವಾಗ ನಮಗೆ ಪರಿಸರದ ಮಹತ್ವ ಅರಿವುಯಾಗುತ್ತಿದೆ ದಯವಿಟ್ಟು ಎಲ್ಲರೂ ಕೂಡ ಗಿಡಮರಗಳನ್ನು ರಕ್ಷಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹರಿದೇವ ಸಂಗನಾಳ ಮತ್ತು ನಾಗೇಶ್ ಮೇತ್ರೆರವರ ಹುಟ್ಟುಹಬ್ಬದ ಕೂಡಾ ಆಚರಣೆ ಮಾಡಲಾಯಿತು ಪ್ರತಿಯೊಬ್ಬರು ತನ್ನ ಹುಟ್ಟುಹಬ್ಬದಂದು ಗಿಡ ನೆಟ್ಟು ಅದರ ಪಾಲನೆ ಮಾಡಬೇಕು. ಈ ಸಂದರ್ಭದಲ್ಲಿ ಅನಿಲಕುಮಾರ ಸೂರ್ಯವಂಶಿ, ಎಮ್.ಡಿ. ಈಸಾಕಮಿಯಾ ಖಾಜಿ, ಸಿಖರಾತ, ಸೋಪಾನರಾವ ಡೊಂಗರೆ, ರಾಮಚಂದ್ರ ಸದಾಫುಲೆ, ಅಂಕುಶ್ ಡೊಂಗರೆ, ರವಿದ್ರ,ರ ವಿ ದರ್ಬಾರೆ, ಪ್ರಶಾಂತ್ ದರ್ಬಾರೆ, ಸುದೀಪ್ ದರ್ಬಾರೆ, ಕಿರಣ್, ಉಪಸ್ಥಿತರಿದ್ದರು