ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ತಮ್ಮದೇ ಆದ ಕೊಡುಗೆ ನೀಡಬೇಕು: ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ

module: j; hw-remosaic: 0; touch: (0.5510417, 0.5510417); modeInfo: ; sceneMode: Auto; cct_value: 0; AI_Scene: (-1, -1); aec_lux: 104.52466; hist255: 0.0; hist252~255: 0.0; hist0~15: 0.0;

ಕೊಲ್ಹಾರ: ಜೂ.6:ಮನುಷ್ಯನಿಗೆ ಆರೋಗ್ಯದಷ್ಟೆ ಪ್ರಮುಖವಾಗಿ ಪರಿಸರ ಕಾಳಜಿಯೂ ಇರಬೇಕಾಗಿದ್ದು ಪ್ರತಿಯೊಬ್ಬರೂ ಗಿಡ ಮರಗಳನ್ನು ಪ್ರೀತಿಸಿ ಅವುಗಳನ್ನು ಬೆಳೆಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು
ವಿಶ್ವ ಪರಿಸರ ದಿನಾಚರಣೆ ಹಾಗೂ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಅವರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ವಿಶ್ವಭಾರತಿ ವಿದ್ಯಾವರ್ಧಕ ಸಂಘ (ರಿ) ಯಲ್ಲಮ್ಮದೇವಿ ಅಃSಇ ಶಾಲೆಯ ಮೈದಾನದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು
ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾನವ ಚಟುವಟಿಕೆಗಳಿಂದ ಉಂಟಾಗುವ ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಈ ದಿನವು ನಮ್ಮ ಪರಿಸರವನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಹಲವಾರು ಕ್ರಮಗಳು ನೆನಪಿಸುತ್ತದೆ. ನಮ್ಮ ಪರಿಸರದ ಮೇಲೆ ಪರಿಣಾಮ ಬೀರಲು ಜಾಗತಿಕ ತಾಪಮಾನವು ಮುಖ್ಯ ಕಾರಣ ಎಂದು ನಮಗೆ ತಿಳಿದಿದೆ ಹೀಗಾಗಿ, ಪರಿಸರವನ್ನು ಉಳಿ ಸುವುದು ಮತ್ತು ರಕ್ಷಿಸುವುದು ನಮ್ಮ ಕರ್ತವ್ಯ. ಅಲ್ಲದೆ, ಪರಿಸರವನ್ನು ಹಾಳು ಮಾಡುವ ಎಲ್ಲಾ ರೀತಿಯ ಶೋಷಣೆ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇದಲ್ಲದೆ, ಇದು ನಮ್ಮ ಉಳಿವಿಗಾಗಿ ಮತ್ತು ಮುಂದಿನ ಪೀಳಿಗೆಗೆ ಮೂಲಭೂತ ಅವಶ್ಯಕತೆಯಾಗಿದೆ ಎಂದರು ಭೂಮಿಯ ಹಸಿರು ಹೊದಿಕೆಯು ಏರಿಕೆಯಾಗುವುದಲ್ಲದೆ, ಶುದ್ಧಗಾಳಿ ಹಾಗೂ ತಂಪಾದ ವಾತಾವರಣ ಲಭ್ಯವಾಗುತ್ತದೆ. ಗಿಡ, ಮರಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು ಹಾಗೂ ಇದರಿಂದ ಅಂತರ್ಜಲದ ಮಟ್ಟವು ಉತ್ತಮಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಕಲ್ಲಿನಾಥ ದೇವರು, ಕೊಲ್ಹಾರ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಶ್ರೀಗಳು ಚಂದ್ರಶೇಖರಯ್ಯ ಹಿರೇಮಠ್
ಶ್ರೀಮತಿ ಕಸ್ತೂರಿ ಎಸ್ ಬೆಳ್ಳುಬ್ಬಿ, ಚಿನ್ನಪ್ಪ ಗಿಡ್ಡಪ್ಪಗೋಳ,ಮಲ್ಲಿಕಾರ್ಜುನ ಬೆಳ್ಳುಬ್ಬಿ, ಶಾಲೆಯ ಆಡಳಿತ ಅಧಿಕಾರಿ ಬಿ ಎಸ್ ನಿಂಬಾಳ್ಕರ್
ಪ ಪಂ ಸದಸ್ಯ ಬಾಬು ಬಜಂತ್ರಿ, ಅಪ್ಪಾಸಿ ಮಟ್ಟಿಹಾಳ, ಮಂಜುನಾಥ್ ತುಂಬರಮಟ್ಟಿ ಸಹಿತ ಅನೇಕರು ಉಪಸ್ಥಿತರಿದ್ದರು.