ಪರಿಸರ ಸಂರಕ್ಷಣೆಗೆ ಡಿಆರ್ ಕೆ ರಂಗಸಿರಿಯಲ್ಲಿ ಸಸಿ ನೆಟ್ಟರು

ಬಳ್ಳಾರಿ, ಏ.18: ನಗರದ ಡಿ. ಆರ್ ಕೆ ರಂಗಸಿರಿಯ ಆವರಣದಲ್ಲಿ 82 ನೆಯ ಪರಿಸರ ಸಂರಕ್ಷಣೆಯ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಗಿಡಮರಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಸಮೃದ್ಧಿ ಫೌಂಡೇಶನ್ ಮುಖ್ಯಸ್ಥೆ ಹರಣಿ ಅವರು ಈ ಸಂದರ್ಭದಲ್ಲಿ ಹೇಳಿದರು.
ಗಾಳಿ, ನೀರು, ಬೆಳಕು ಮಾನವನಿಗೆ ಸಿಗುವ ನಿಸರ್ಗದ ವರಗಳು. ಅವುಗಳನ್ನು ಉಳಿಸಿಕೊಂಡು ಜೀವನ ಮಾಡಲು ಗಿಡಮರಗಳನ್ನು ನೆಟ್ಟು ಪರಿಸರವನ್ನು ಕಾಪಾಡಿಕೊಳ್ಳೋಣ ಎಂಬುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಇದ್ದ ರಂಗಸಿರಿಯ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರ ಮಾತನಾಡುತ್ತಾ. ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಹರಿಣಿ ರಾಯಸಂ ಮತ್ತು ಸಮೃದ್ಧಿ ಫೌಂಡೇಶನ್ ಕೆಲಸ ಕಾರ್ಯ ತುಂಬಾ ಶ್ಲಾಘ ನೀಯ ವಾದದ್ದು, ಸಮಾಜ ಸೇವೆ ಹಾಗೂ ಪರಿಸರ ಸಂರಕ್ಷಣೆಗೆ ಅವರೊಂದಿಗೆ ಎಲ್ಲರೂ ಕೈಜೋಡಿಸುವ ಮೂಲಕ ಈ ದೇಶವನ್ನು ರಕ್ಷಿಸೋಣ ಎಂದರು.
ಸಮೃದ್ಧಿ ಫೌಂಡೇಶನ್ ಸದಸ್ಯರಾದ ಗೋವಿಂದರಾಜು, ಹನುಮಂತರೆಡ್ಡಿ, ಪದ್ಮಾವತಿ, ಪ್ರಹಲ್ಲಾದ್ ರೆಡ್ಡಿ ಹಾಗೂ ಗಣೇಶ್ ಮೋಹನಗೌಡ ಇತರರು ಉಪಸ್ಥಿತರಿದ್ದರು