ಪರಿಸರ ಸಂರಕ್ಷಣೆಗೆ ಜನಸಂಖ್ಯೆ ನಿಯಂತ್ರಣ ಅಗತ್ಯ


ಸಂಜೆವಾಣಿ ವಾರ್ತೆ
ಗಂಗಾವತಿ, ಜು.16: ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ. ಆಹಾರ ಹಾಗೂ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದು ನಗರಸಭೆ ಸದಸ್ಯ ನವೀನಕುಮಾರ ಪಾಟೀಲ್ ಹೇಳಿದರು.
ನಗರದಲ್ಲಿ 24 ನೇ ವಾರ್ಡ್ ಲಕ್ಷ್ಮೀ ಕ್ಯಾಂಪನಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಜನಸಂಖ್ಯೆ ಸುಮಾರು 500 ಕೋಟಿಗೆ ತಲುಪಿದ ದಿನದಂದು ಅಂದಿನಿಂದ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿವಿಧ ಫೋಷವಾಕ್ಯಗಳೊಂದಿಗೆ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯೆ ದಿನಾಚರಣೆ ಆಚರಣೆ ಮಾಡಲಾಯಿತು ಆದ್ರೇ ಆಚರಣೆ ಮಾಡಿ ಬಿಡುವುದಲ್ಲಾ ಕಾರ್ಯ ರೂಪಕ್ಕೆ ತವರುವುದು ನಮ್ಮ ನಿಮ್ಮ ಜವಾಬ್ದಾರಿ ಆದಕಾರಣ  ಪ್ರತಿ ನಿಮಿಷಕ್ಕೆ ಪ್ರತಿ ಘಂಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತೀರುವದರಿಂದ ಆಹಾರ ನೀರು, ಬಟ್ಟೆ, ವಸತಿ, ಹಾಗೂ ಖನಿಜಗಳ ಸಂಖ್ಯೆ ಕೊರತೆ ಆಗುತ್ತದೆ ಆದಕಾರಣ  ಜನಸಂಖ್ಯೆ ತಡೆಗಟ್ಟಲು ಇರುವ ಕೆಲವು ಮಾರ್ಗಗಳು ಮದುವೆಯಾಗಲು ಗಂಡಿಗೆ 21 ವರ್ಷ ಮತ್ತು ಹೆಣ್ಣಿಗೆ 18 ವರ್ಷ ತುಂಬಿರಬೇಕು. ಮದುವೆಯಾದ ನಂತರ ಕನಿಷ್ಟ ಮೂರು ವರ್ಷಗಳವರೆಗೂ ಮೊದಲನೆಯ ಮಗುವನ್ನು ಪಡೆಯಬಾರದು ಹಾಗೂ ಜನಗಳ ನಡುವೆ ಕಡೇ ಪಕ್ಷ ನಾಲ್ಕು ವರ್ಷಗಳ ಅಂತರವಿರಬೇಕು ಈ ಒಂದು ತಡೆಗಟ್ಟಲು ನಿರೋದ್ ಬಳಕೆಯನ್ನು ಮಾಡಬೇಕು ಎಲ್ಲಾ ಉಪಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನ ಅಧಿಕಾರಿಗಳಾದ ಡಾ.ರವೀಂದ್ರನಾಥ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ, ಡಾ.ರಮೇಶ, ಡಾ.ಶಬರೀನ್, ಆರೋಗ್ಯ ಸಿಬ್ಬಂದಿ ವೀರೇಶ ಎಲ್.ಡಿ.ಸಿ, ಮುಖ್ಯೋಪಾಧ್ಯಾಯರಾದ ಮಾತಮ್ಮ ಪತ್ತಾರ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಆಚಾರ್ಯ, ಸುಮಾ,ಮೀನಾಕ್ಷಿ, ಸರೋಜಬಾಯಿ,ಗೌಸೀಯಾ, ದೀಪಾ,ಗಾಯಿತ್ರಿ,ಸವಿತ,ಸೇರಿದಂತೆ ಇದ್ದರು