
ಹುಮನಾಬಾದ್: ಜು.16:ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ನಿಷೆಧಿಸಬೇಕೆಂದು ಪುರಸಭೆ ಮುಖ್ಯ ಅಧಿಕಾರಿ ಶಿವಕುಮಾರ ಹುಮನಾಬಾದ ಪುರಸಭೆ ವತಿಯಿಂದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮಾಡಿ ಮನವಿ ಮಾಡಿದರು. ಅಂಗಡಿಗಳಲ್ಲಿ ಪ್ಲಾಸ್ಟಿಕ ಮಾರಾಟ ನೀಷೆಧಿಸಲಾಗಿದೆ. ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಸದಿರಲು ತಿಳಿಸಿದರು. ಸಾರ್ವಜನಿಕರು ಅಂಗಡಿ ಮುಗ್ಗಟ್ಟುಗಳಲ್ಲಿ ಪ್ಲಾಸ್ಟಿಕ್ ಗ್ಲಾಸಗಳು, ಬಟ್ಟಲುಗಳು, ಕ್ಯಾರಿಬ್ಯಾಗ ಬಳಸದಿರಲು ಮನವಿ ಮಾಡಲಾಯಿತು. ಪರಿಸರವಾದಿ ಶೈಲೇಂದ್ರ ಕಾವಡಿ ಪ್ಲಾಸ್ಟಿಕ ನಿಂದಾಗುವ ಮಾಲಿನ್ಯ ಕುರಿತು ಸಾರ್ವಜನಿಕರಿಗೆ ವಿವರಿಸಿದರು. ಹಸಿರು ಸ್ವಚ್ಚ ಪ್ಲಾಸ್ಟಿಕ ಮುಕ್ತ ಪಟ್ಟಣ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಅಭಿನಯದ ಅಂಗವಾಗಿ ಪಟ್ಟಣದಲ್ಲಿ ಅಂಗಡಿಗಳಿಗೆ ಬೇಟ್ಟಿ ನೀಡಿ ಜಾಗೃತಿ ಮಾಡಲಾಯಿತು ಈ ಅಭಿಯಾನದಲ್ಲಿ ಪರಿಸರ ಅಭಿಯಂತರರಾದ ವೀರಶೆಟ್ಟಿ, ಆರೋಗ್ಯ ನೀರಿಕ್ಷಕರಾದ ಶಾಮದಾಸ ಗಾಯಕವಡ, ಸಲಿಮ್ ಹಾಗೂ ಸರ್ವೋದಯ ಕಾಲೇಜಿನ ವಿಧ್ಯಾರ್ಥಿನಿಯರು ಭಾಗವಹಿಸಿದರು ಜಾಗೃತಿ ಮೂಡಿಸಿದರು