ಪರಿಸರ ವಿನಾಶದಿಂದ ಜೀವ ಸಂಕುಲಕ್ಕೆ ಆಪತ್ತು – ಶಾಸಕ  ಬಿ.ದೇವೇಂದ್ರಪ್ಪ

ಸಂಜೆವಾಣಿ ವಾರ್ತೆ

ಜಗಳೂರು.ಜು.೨ :- ಪರಿಸರ ವಿನಾಶದಿಂದ ಜೀವ ಸಂಕುಲಕ್ಕೆ ಆಪತ್ತು ಎಂದು ಶಾಸಕ ಬಿ.ದೇವೇಂದ್ರಪ್ಪ ಕಳವಳ ವ್ಯಕ್ತ ಪಡಿಸಿದರು.ಪಟ್ಟಣದ ನಾಲಂದ‌ಕಾಲೇಜಿನ‌ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಸಪ್ತಾಹ ಕಾರ್ಯ ಕ್ರಮಕ್ಕೆ‌ ಚಾಲನೆ ನೀಡಿ ಅವರು ಮಾತನಾಡಿದರು.ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಬೇಕಿದೆ.ವನ ಮಹೋತ್ಸವ ಆಚರಣೆಗೆ ಸೀಮಿತವಾಗದೆ ವರ್ಷವಿಡೀ ಸಸಿ ನೆಡು ವಿಕೆ ಗಿಡಮರಗಳ ಲಾಲನೆ ಪಾಲನೆಗೆ ಕಾಳಜಿವಹಿಸಿದರೆ ಅರಣ್ಯ ಸಂಪತ್ತು ಹೆಚ್ಚುತ್ತದೆ.ಮನುಷ್ಯ ಸ್ವಾರ್ಥಕ್ಕಾಗಿ ಮರಗಳ ಮಾರಣ ಹೋಮ ನಡೆಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.ರಾಜ್ಯ ಸರಕಾರ ಪ್ರಸಕ್ತ ಸಾಲಿನ ಜುಲೈ 1 ರಿಂದ‌ 7 ರವರೆಗೆ ವನ ಮಹೋತ್ಸವ ಸಪ್ತಾಹ ಕಾರ್ಯಕ್ರಮದಡಿ ರಾಜ್ಯ ವ್ಯಾಪಿ ಶಾಲಾ ಕಾಲೇಜು ಹಾಗೂ ಸರಕಾರಿ ಕಛೇರಿಗಳ ಆವರಣದಲ್ಲಿ 1 ಕೋಟಿ ಸಸಿಗಳನ್ನು ನೆಡಲು ಸಂಕಲ್ಪ ಹೊಂದಲಾಗಿದ್ದು ಸಂಬಂಧಿಸಿದ ಇಲಾಖೆಗೆ ನಿರ್ದೇಶನ‌ ನೀಡಲಾಗಿದೆ ಎಂದು ಹೇಳಿದರು.ಪರಿಸರದಲ್ಲಿ ಗಿಡಮರಗಳ ಸಂಖ್ಯೆ ಕ್ಷೀಣದಿಂದ ಕೋವಿಡ್ ಮಹಾ ಮಾರಿ ಆಕ್ರಮಣದ ವೇಳೆ ರೋಗಿಗಳಿಗೆ ಆಮ್ಲಜನಕದ ಕೊರತೆ ನೀಗಿಸಲು ಕೃತಕ ವೆಂಟಿಲೇಟರ್ ಗಳನ್ನು ಬಳಕೆಮಾಡಿದ್ದು ಮರೆ ಯಲು ಸಾಧ್ಯವಿಲ್ಲ.ಆದ್ದರಿಂದ ಜೀವಸಂಕುಲಕ್ಕೆ ಶುದ್ದ ಆಮ್ಲಜನಕ ಒದಗಿಸುವ ಮರಗಿಡಗಳನ್ನು ಸಂರಕ್ಷಿಸೋಣ ಎಂದು ಕರೆ ನೀಡಿ ದರು.ಈ ಸಂದರ್ಭದಲ್ಲಿ ಅಮರ ಭಾರತಿ ವಿದ್ಯಾಕೇಂದ್ರದ ಕಾರ್ಯದರ್ಶಿ ಮಧುಕುಮಾರ್, ಆಡಳಿತಾಧಿಕಾರಿ ಶ್ವೇತಾ ಮಧುಕುಮಾರ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಿ.ಟಿ. ಶ್ರೀನಿವಾಸ್,ಉಪವಲ ಯ ಅರಣ್ಯಾಧಿಕಾರಿ ಗಳಾದ ರಶ್ಮಿ ,ನಿಸಾರ್ ಅಹಮ್ಮದ್,ಚೇತನ್ ಡಿ.ಬಿ,ಗಸ್ತು ಅರಣ್ಯಾಧಿಕಾರಿಗಳಾದರಾಜಣ್ಣ ,ಎಚ್.ನಾಗರಾಜ್, ಮುರಡಿಸ್ವಾಮಿ,ಎನ್.ಎಚ್.ಅಂಜಿನಪ್ಪ .ಸಿಬ್ಬಂದಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮಹಮ್ಮದ್ ಗೌಸ್,ತಮಲೇಹಳ್ಳಿ ತಿಮ್ಮಣ್ಣ.ಶೇಖರಪ್ಪ ಸೇರಿದಂತೆ ಇದ್ದರು.