ಪರಿಸರ ವಿನಾಶದಿಂದ ಜೀವಸಂಕುಲಕ್ಕೆ ಆಪತ್ತು

ಹರಪನಹಳ್ಳಿ.ಜೂ.೭; ಪರಿಸರ ವಿನಾಶದಿಂದ  ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಆಪತ್ತು ಎದುರಾಗಲಿದೆ ಎಂದು ಗ್ರಾ.ಪಂ ಅಧ್ಯಕ್ಷ ಟಿ. ಶಿವಣ್ಣ  ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಅಣಜಿಗೆರೆ ಗ್ರಾಮಪಂಚಾಯಿತಿ ಆವರಣದಲ್ಲಿ ವಿಶ್ವ  ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿನೆಡುವ ಹಾಗೂ ಕೊರೊ‌ನ ವಾರಿಯರ್ಸ್ ಗಳಿಗೆ  ಮಾಸ್ಕ್ ,ಸಾನಿಟೈಸರ್ ,ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಹಾಗೂ ಮಾನವನ ದುರಾಸೆಯಿಂದ ಪ್ರಕೃತಿಯಲ್ಲಿ ಸಾಕಷ್ಟು ಮರಗಿಡಗಳ ಸಂಖ್ಯೆ ಕ್ಷೀಣಿಸುತ್ತಿದ್ದು.ಗ್ರಾಮೀಣ ಭಾಗದಿಂದಲೇ ಜನಜಾಗೃತಿ ಮೂಡಿಸಿ ಪರಿಸರ ಪ್ರೇಮಿಗಳಾಗಬೇಕಿದೆ ಎಂದರು.
ಪಿಡಿಓ ಪರಮೇಶ್ವರಪ್ಪ ಮಾತನಾಡಿ,ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು.ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿ ನೆಡುವ ಮೂಲಕ ಜಾಗೃತಿ ಮೂಡಿಸಿದರೆ.ವಿಶ್ವ ಪರಿಸರ ದಿನಾಚರಣೆಗೆ ಅರ್ಥ ಸಿಕ್ಕಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಜ್ಯೋತಿಪರುಶರಾಮ್ ,ಗ್ರಾಮಲೆಕ್ಕಾಧಿಕಾರಿ ನಾಗರತ್ನ,ಬಿಲ್ ಕಲೆಕ್ಟರ್ ಗಳಾದ  ದಂಡ್ಯಪ್ಪ,ಆಚಾರಿ,ಸಿಬ್ಬಂದಿಗಳು ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.