ಪರಿಸರ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ

ಧಾರವಾಡ,ಆ9: ಪರಿಸರ ನಮ್ಮ ಜೀವಾಳ, ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸಿರಿಧಾನ್ಯಗಳ ಆಹಾರ ಆರೋಗ್ಯ ಯುತವಾದ ಜೀವನಕ್ಕೆ ಪೂರಕವಾಗಿದ್ದು, ಪ್ರಸ್ತುತ ನಾವು ನೀರು, ಗಾಳಿ, ಭೂಮಿಯ ಉಪಯೋಗವನ್ನು ಪರಿಸರ ಸ್ನೇಹಿಯಾಗಿ ಮಿತವಾಗಿ ಬಳಸಿ, ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ತಜ್ಞ ಡಾ. ಪ್ರಕಾಶ್ ಭಟ್ ಅವರು ಹೇಳಿದರು.
ಭಾರತ ಸರಕಾರ ನೆಹರು ಯುವ ಕೇಂದ್ರ ಧಾರವಾಡ, ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಧಾರವಾಡ, ಎನ್.ಎಸ್.ಎಸ್, ಎನ್.ಸಿ.ಸಿ, ಯುವ ರೆಡ್ ಕ್ರಾಸ್, ರೇಂಜರ್ಸ್ ರೋವರ್ಸ್, ಹಾಗೂ ಗ್ರಂಥಾಲಯ ವಿಭಾಗಗಳ, ಸಹಯೋಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸಿರಿಧಾನ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತಿಕ ಭೂ ತಾಪಮಾನ ಏರಿಕೆಯಿಂದ ಮನುಕುಲ ಇಂದು ಅಳಿವಿನಂಚಿಗೆ ಬಂದಿದೆ. ದಿನನಿತ್ಯ ಬಳಸಿ ಬಿಸಾಡುವ ವೈಭವದ ಆಧುನಿಕ ಜೀವನ ಶೈಲಿ ಪರಿಸರಕ್ಕೆ ಮಾರಕವಾಗಿದೆ, ಪ್ರತಿಯೊಬ್ಬರು ಪರಿಸರ ಸ್ನೇಹಿ ಜೀವನಶೈಲಿ ರೂಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪೆÇ್ರ. ನಳಿನಿ ಬೆಂಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ಸಂಪ್ರದಾಯದ ಮೂಲ ಪದ್ಧತಿಯಾದ ಸಿರಿಧಾನ್ಯ ಇದು ಮೊದಲು ಕಿರಿಧಾನ್ಯ ಎಂದು ಕರೆಯಲಾಗುತ್ತಿತ್ತು. ಮತ್ತು ಈ ಕಿರಿಧಾನ್ಯ ಬಡವರ ಆಹಾರಗಳಾಗಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಸೇವಿಸುವ ಆಹಾರಗಳಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಶ್ರೀ. ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ಮತ್ತು ಗೌರವ ಉಪಸ್ಥಿತಿಯಲ್ಲಿ ಡಾ.ಶಿವಾನಂದ ನರಹಟ್ಟಿ, ಡಾ. ಗಿರೀಶ್ ದೇಸೂರ್, ಡಾ. ಜಿ ಕೆ. ಬಡಿಗೇರ್, ವಿದ್ಯಾ ರಾಯ್ಕರ್, ಪೆÇ್ರ. ಸಂಜೋತ ಶಿರಸಂಗಿ, ಪೆÇ್ರ. ಲತಾ ಪಾಟೀಲ, ಪ್ರಕಾಶ ಬಾಳಿಕಾಯಿ, ಶಿವಾಜಿ ಎನ್.ಕೆ ಇದ್ದರು.
ಡಾ.ಬಿ.ಎಸ್.ತಲ್ಲೂರ ಅವರು ಪ್ರಾಸ್ತಾವಿಸಿ ನಿರೂಪಿಸಿದರು. ನೆಹರು ಯುವ ಕೇಂದ್ರದ ಯುವ ಅಧಿಕಾರಿ ಗೌತಮ್ ರೆಡ್ಡಿ ಸ್ವಾಗತಿಸಿದರು, ಡಾ. ವಿಜಯ್ ಕುಮಾರಿ ಚಿಲಕವಾಡ ಅವರು ವಂದಿಸಿದರು.
ಇದೆ ಸಂದರ್ಭದಲ್ಲಿ ಪ್ರಾಧ್ಯಾಪಕರು ಮತ್ತು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ಯುವ ಜನರು ವಿವಿಧ ರೀತಿಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಕಾಲೇಜಿನಲ್ಲಿ ಹಬ್ಬದ ವಾತಾವರಣವಿತ್ತು. ಯುವಕ-ಯುವತಿಯರು ಸಿರಿಧಾನ್ಯಗಳ ತಿಂಡಿಗಳ ಅಂಗಡಿಗಳನ್ನು ಸ್ಥಾಪಿಸಿ ತಿಂಡಿಗಳನ್ನು ಮಾರಾಟ ಮಾಡಿದರು.