ಪರಿಸರ ರಕ್ಷಿಸಿ, ಅದು ನಮ್ಮನ್ನು ರಕ್ಷಿಸುತ್ತದೆ: ಮಹೇಶ ಕ್ಯಾತನ

ವಿಜಯಪುರ,ಜೂ.8: ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ(ರಿ), ವಿಜಯಪುರ ಜನವೇದಿಕೆ (ಸಿ.ಸಿ.ಎಫ್.ಎಫ್), ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ(ರಿ), ವಿಜಯಪುರ ಇವರ ಸಹಯೋಗದಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು.
ಸಸಿ ಹಂಚಿಕೆ ಮಾಡುವುದರ ಮೂಲಕ ಮಹೇಶ ಕ್ಯಾತನ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರವನ್ನು ಮಾನವನು ತನ್ನ ಅಗತ್ಯಕ್ಕೆ ಜಾಸ್ತಿಯಾಗಿ ಉಪಯೋಗಿಸುತ್ತಿದ್ದಾನೆ. ಈ ಮೂಲಕ ಪರಿಸರಕ್ಕೆ ಮಾನವನೇ ಕುತ್ತನ್ನು ತರುತ್ತಿದ್ದಾನೆ. ಪರಿಸರ ನಾಶದ ಜೊತೆಗೆ ಪ್ರಾಣಿ, ಪಕ್ಷಿಗಳ ಸಂಕುಲವನ್ನು ನಾಶ ಮಾಡುತ್ತಿದ್ದಾನೆ. ಇಂದು ಮನಷ್ಯ ಭೂಮಿಯ ಮೇಲೆ ಬದುಕಲು ಅಗತ್ಯವಾದ ಆಮ್ಲಜನಕÀ ಕೊರತೆಯನ್ನು ಎದುರಿಸುತ್ತಿದ್ದಾನೆ. ಪರಿಸರ ನಾಶದಿಂದ ಅನೇಕ ರೋಗಗಳಿಗೆ ಬಲಿಯಾಗಿ ಸಣ್ಣ ವಯಸ್ಸಿನಲ್ಲಿ ಮರಣ ಹೊಂದುವುದನ್ನು ನಾವು ಸಮಾಜದಲ್ಲಿ ಕಾಣುತ್ತಿದ್ದೇವೆ. ಪರಿಸರವನ್ನು ನಾಶ ಮಾಡುವುದರ ಮೂಲಕ ದೊಡ್ಡ ಅಪಾಯವನ್ನು ಸೃಷ್ಟಿಸುತ್ತಿದ್ದೇವೆ. ಮುಂಬರುವ ಪೀಳಿಗೆಗೆ ನಾವು ಮಾರಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪರಿಸರವನ್ನು ಉಳಿಸಬೇಕಾದರೆ ನಾವು ಮೊದಲು ಪರಿಸರ ಕಾಳಜಿಯನ್ನು ಮಾಡಬೇಕಾಗಿದೆ. ಸಮಾಜದಲ್ಲಿ ಪರಿಸರದ ಕಾಳಜಿಯನ್ನು ಮೂಡಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಾಗಿದೆ. ಪರಿಸರ ಉಳಿಸೋಣ ಮತ್ತು ಬೆಳೆಸೋಣ ಈ ಮೂಲಕ ಮುಂಬರುವ ಪೀಳಿಗೆಗೆ ಕೊಡುಗೆಯನ್ನು ಕೊಡೋಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಫಾzರ್À ಫ್ರಾನ್ಸಿಸ್ ಮೆನೆಜಸ ಅವರು ಮಾತನಾಡಿ, ಪರಿಸರವನ್ನು ಕಾಪಾಡಬೇಕಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಮನೆಯಲ್ಲಿ ಮಗುವನ್ನು ಪೋಷಣೆ ಮಾಡಿದ ರೀತಿಯಲ್ಲಿ ನಾವು ಇವತ್ತು ಪರಿಸರವನ್ನು ಪೋಷಿಸಬೇಕಿದೆ. ಇದು ಕೇವಲ ಪರಿಸರ ದಿನಾಚರಣೆ ಕಾರ್ಯಕ್ರಮವಾಗದೆ ಒಂದು ಅಭಿಯಾನವಾಗಿ ಮಾರ್ಪಡಬೇಕೆಂದು ಕರೆ ನೀಡಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಟಿಯೋಲ್ ಮಚಾದೊ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ ಅಧ್ಯಕ್ಷ ಮುತ್ತು ಭೋವಿ, ಗೃಹ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಫsÀರ್ಜಾನಾ ಜಮಾದಾರ, ಮಹಿಳಾ ಒಕ್ಕೂಟ ಕಾರ್ಯದರ್ಶಿ ಕವಿತಾ ರಾಠೋಡ ಹಾಗೂ ವಿವಿಧ ಸ್ಲಂಗಳÀ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಟಾಟಾ ಏಸ್ ಚಾಲಕರು, ಯುವತಿಯರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ಕಾಮಿನಿ ಕಸಬೆ ಸ್ವಾಗತಿಸಿದರು. ಸುನೀತಾ ಮೋರೆ ನಿರೂಪಿಸಿದರು. ಮುತ್ತು ಭೋವಿ ವಂದಿಸಿದರು.