
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 3 :- ಮನೆಗೊಂದು ಮರ ಊರಿಗೊಂದು ವನ ಅನ್ನೋಹಾಗೆ ಪ್ರತಿಯೊಬ್ಬರೂ ಮನೆಗಳ ಮುಂದೆ ಒಂದೊಂದು ಸಸಿ ನೆಟ್ಟು ಪರಿಸರ ಉಳಿಸಿ ಬೆಳೆಸಿ ರಕ್ಷಣೆ ಮಾಡಿದರೆ ಅದು ನಮ್ಮ ಜೀವನ ಪರ್ಯಂತ ಆರೋಗ್ಯ ರಕ್ಷಣೆ ಮಾಡುತ್ತದೆ ಎಂದು ನೇಕಾರ ಕುರುಹಿನ ಶೆಟ್ಟಿ ಸಮಾಜದ ಕೂಡ್ಲಿಗಿ ತಾಲೂಕು ಅಧ್ಯಕ್ಷ ಐಲಿ ಶಾಂತವೀರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಹೊರವಲಯದ ಕುಪ್ಪಿನಕೆರೆ ಕ್ರಾಸ್ ಬಳಿ ಇರುವ ಶ್ರೀ ನೀಲಕಂಠೇಶ್ವರ ದೇವಸ್ಥಾನ ಖಾಲಿ ನಿವೇಶನದ ಆವರಣದ ಸುತ್ತಲೂ ಪರಿಸರ ದಿನಾಚರಣೆ ಕುರಿತಾಗಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಣೆಗೆ ಮುಂದಾಗಿ ಮಾತನಾಡುತ್ತ ಮನುಷ್ಯರು ಯಾವುದೋ ಮೋಜು ಮಸ್ತಿಗೆ ಮುಂದಾಗಿ ಇಂದು ಸುತ್ತಮುತ್ತಲ ಪರಿಸರ ಹಾಳು ಮಾಡುತ್ತಿದ್ದು ಇದರಿಂದ ಮನುಷ್ಯನ ಆರೋಗ್ಯ ಏರುಪೇರಾಗುವುದರಲ್ಲಿ ಸಂಶಯವಿಲ್ಲ ಎಂದು ಯುವಪೀಳಿಗೆಗೆ ಪರಿಸರ ರಕ್ಷಣೆ ಕುರಿತು ಕಿವಿಮಾತು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಜಾಗವನ್ನು ದಾನವಾಗಿ ನೀಡಿದಂಥ ಸಹೋದರರಾದ ದಬ್ಬಡಿ ಗಂಗಾಧರ ಹಾಗೂ ದಬ್ಬಡಿ ಚಂದ್ರಶೇಖರ ರವರಿಗೆ ಸಮಾಜದ ವತಿಯಿಂದ ಅಭಿನಂದಿಸಲಾಯಿತು.
ಸಮುದಾಯದ ಕಾರ್ಯದರ್ಶಿ ಐಲಿ ರವಿಶಂಕರ್ ಸ್ವಾಗತಿಸಿ ಹಾಗೂ ವಂದಿಸಿದರು, ಪದಾಧಿಕಾರಿಗಳಾದ ಡಿ.ಕೊಟ್ರೇಶ, ಐಲಿ ಚಂದ್ರು, ಡಿ. ಹೊನ್ನೂರ, ಐಲಿ ಸಂದೀಪ, ಡಿ. ಸುರೇಶ, ಐಲಿ ಪ್ರವೀಣ, ಶ್ಯಾವೆ ಕಿಶೋರ್, ನಾಗೊಳ್ಳಿ ನಾಗರಾಜ, ಐಲಿ ಪ್ರಸನ್ನ ಕುಮಾರ, ಐಲಿ ಸಿದ್ದಾರ್ಥ, ಬಿ. ವಸಂತ ವಿಜಿ, ಹಾಗೂ ಇನ್ನೂ ಅನೇಕ ಸದಸ್ಯರು, ಬಂಧುಗಳು ಭಾಗವಹಿಸಿದ್ದರು.
One attachment • Scanned by Gmail