ಪರಿಸರ ರಕ್ಷಿಸದೆ ಹೋದರೆ ಭವಿಷ್ಯತ್ತಿನಲ್ಲಿ ಆಮ್ಲಜನಕ ಸಿಗದೇ ಪರಿತಪಿಸಬೇಕಾಗುತ್ತದೆ: ದಾನೇಶ ಅವಟಿ

ವಿಜಯಪುರ, ಜೂ.9-ನಗರದ ಹೊರವಲದಲ್ಲಿರುವ ವಾರ್ಡ ನಂಬರ್-16 ರಲ್ಲಿ ಬಸವನಗರ ಇಸ್ಟ ಮಲ್ಲಿನಾಥ ಸೇವಾ ಸಮಿತಿ ಹಾಗೂ ವರ್ಕ್ ಇಸ್ ವರ್ಸಿಪ್ ಇಂಟರ್ ನ್ಯಾಷನಲ್ ಫೌಂಡೇಶನ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಮತ್ತು ಕೊವಿಡ್ ಸಂತ್ರಸ್ತರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಸಿಗೆ ನೀರೆರೆದು ಮಾತನಾಡಿದ ವರ್ಕ್ ಇಸ್ ವರ್ಶಿಪ್ ಇಂಟರ್ ನ್ಯಾಷನಲ್ ಫೌಂಡೇಶನ್ ಅದ್ದಕ್ಷ ನ್ಯಾಯವಾದಿ ದಾನೇಶ ಅವಟಿ ಅವರು ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಇಲ್ಲದೇ ಹೋದರೆ ಭವಿಸ್ಹತ್ತಿನ್ನಲ್ಲಿ ನಾವು ಮಳೆ ಬಾರದೆ. ಶುದ್ದ ಕುಡಿಯುವ ನೀರು. ಆಮ್ಲಜನಕವು ಸಿಗದೇ ಪರಿತಪಿಸಬೇಕಾಗುತ್ತದೆ.ಅವನ್ನು ಕೊಂಡು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.
ನೀರು. ವಾಯು ಮತ್ತು ಪರಿಸರಕ್ಕಾಗಿ ಪರಸ್ಪರ ಯುದ್ದ ಮಾಡುವ ಅನಿವಾರ್ಯತೆ ಸೃಷ್ಟಿಯಾಗಲೀದೆ. ಕಾರಣ ಈಗಲೇ ಎಚ್ಚೆತ್ತು ಮುಂದಿನ ಭಾವಿ ಜನಾಂಗಕ್ಕಾಗಿ ಪರಿಸರ ರಕ್ಷಣೆ. ಗಿಡ ಮರ ಬೆಳೆಸಿ. ನಾಡು ಉಳಿಸೋಣ ಎಂದು ಹೇಳಿದರು.
ಇಸ್ಟ ಮಲ್ಲಿನಾಥ ಸೇವಾ ಸಮಿತಿ ಅಧ್ಯಕ್ಷ ಯುವ ಧುರೀಣ. ಶರಣಬಸು ಕೊನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಸ್ತುತ ಸಂದರ್ಭದಲ್ಲಿ ಘಟಿಸುತ್ತಿರುವ ಕರೋಣಾ. ಬ್ಲಾಕ್ ಫಂಗಸ್ ದಂಥ ಖಾಯಿಲೆ. ನೆರೆ ಬರ. ಭೂಕಂಪ ಸುನಾಮಿ ಯoತಹ ಹವಾಮಾನ ವೈಪೀತ್ಯಕ್ಕೇ ಮಾನವನ ದುರಾಸೆ. ಸೃಷ್ಠಿಯ ಮೇಲೆ ಸವಾರಿ ಮಾಡಲು ಹೊರಟಿರುವ ದೌರ್ಜನ್ಯವೇ ಕಾರಣ ಎಂದರು.
ಈಗಲಾದರೂ ನಾವು ನಮ್ಮ ಸುತ್ತಲಿನ ಅರಣ್ಯ ರಕ್ಷಿಸಿ ಬೆಳೆಸುವ ಮೂಲಕ ಈ ಭೂಮಿಗೆ ಮುಂಬರುವ ಪೀಳಿಗೆಗೆ ಉಪಕಾರ ಮಾಡೋಣ ಎಂದು ಕಿವಿಮಾತು ಹೇಳಿದರು.
ನರಸಣಗಿಯ ಪ್ರಥಮ ದರ್ಜೆ ಗುತ್ತಿಗೆದಾರ ಶಂಕರಗೌಡ ಪಾಟೀಲ್ ಮಾಖ್ಯ ಅತಿಥಿಗಳಾಗಿ ಉಪಸಿತರಿದ್ದು ಮಾತನಾಡಿದರು. ಬುರಣಾಪೂರ ಆರೂಢ ಆಶ್ರಮದ ಶ್ರೀ ಯೋಗಿಶ್ವರಿ ಮಾತಾಜಿ, ಬಸವನಗರ ಶ್ರೀ ಶಿದ್ದಲಿಂಗ ಆಶ್ರಮದ ಶ್ರೀ ಮಹಾದೇವ ಶರಣರು, ಶ್ರೀ ಲಕ್ಷ್ಮಣ ಶರಣರು, ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ್. ದರೆಪ್ಪ ಖಿಲಾರೆ. ಪಾಂಡು ಮೊರೆ. ರಾಜು ಸೋಮು ನಾಯಕ್. ರಾಜು ಚವ್ಹಾಣ. ಸದಾನಂದ ಬಿರಾದಾರ. ಸಿದ್ದು ಪತ್ತಾರ. ಮಹಾಂತೇಶ ಕುಂಬಾರ. ಶಶಿಧರ ಪಟ್ಟಣಶೆಟ್ಟಿ. ಸೋಮನಾಥ್ ಕುಂಬಾರ. ಅಕ್ರಂಪಾಷಾ ಯಾದವಾಡ ಮುಂತಾದವರು ಇದ್ದರು.