ಪರಿಸರ ರಕ್ಷಣೆ ಪ್ರತಿಯೊಬ್ಬರು ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕುಃ ಬಾಳಿಕಾಯಿ

ವಿಜಯಪುರ, ಜೂ.10-ವಿಜಯಪುರ ನಗರಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾಕ್ಟರ್ ಮಲ್ಲಿಕಾರ್ಜುನ್ ಬಾಳಿಕಾಯಿ ಮತ್ತು ಕಾರ್ಯದರ್ಶಿಗಳಾದ ಈರಣ್ಣ ಅಂಗಡಿ ರಾಜ್ಯ ಉಪಾಧ್ಯಕ್ಷರುಗಳಾದ ರಾಜಕುಮಾರ್ ಸಗಾಯಿ, ಪ್ರಕಾಶ ಶೃಂಗೇರಿ ಅವರು ಆಗಮಿಸಿ ಸೇವಾ ಚಟುವಟಿಕೆಯನ್ನು ಡಾಕ್ಟರ್ ಹೆಡಗೆವಾರ್ ಕೋವಿಡ್ ಸೆಂಟರನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿದ ಅವರು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೇ ಉಸಿರು ಎಂಬ ವಾಕ್ಯ ಕೇವಲ ಪದಬಳಕೆಗೆ ಭಾಷಣಕ್ಕೆ ಸೀಮಿತವಾಗದೇ ಈ ಪದವನ್ನು ಪ್ರತಿಯೊಬ್ಬರು ನಿಜಜೀವನದಲ್ಲಿ ಅಳವಡಿಸಿಕೊಂಡರೆ ಪ್ರಕೃತಿ ನಮ್ಮೊಳಗೆ ಗೊತ್ತಾಗದಂತೆ ಅದ್ಭುತ ಶಕ್ತಿಯನ್ನು ಸೃಷ್ಠಿಸುವುದು ಸುಳ್ಳಲ್ಲ ಎಂದು ಹೇಳಿದರು.
ಇಂದು ವಿಜಯಪುರ ನಗರ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಸಿರಿನಿಂದ ಉಸಿರು ಸಸಿ ನೆಡುವ ಕಾರ್ಯ ಮಾಡಲಾಯಿತು ಜೊತೆಗೆ ಕೋವಿಡ ರೋಗದಿಂದ ಗುಣಮುಖರಾಗಿ ಮನೆಗೆ ತೆರಳುತ್ತಿದ್ದ ಒಬ್ಬ ಹಿರಿಯರಿಗೆ ಹಣ್ಣು ವಿತರಿಸಿ ಮಾತನಾಡಿಸಿ ಧೈರ್ಯದ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಸತೀಶ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶಿಂಧೆ, ಪದಾಧಿಕಾರಿಗಳಾದ ರಾಘು ಕಾಪಸೆ, ಆದಿತ್ಯ ತಾವರಗೇರೆ, ಪ್ರವೀಣ ಕೂಡಗಿ, ಸತೀಶ ಅಗಸರ, ಸುನಿಲ ಜೈನಾಪುರ, ವಿಜಯ ಹಿರೇಮಠ, ಹರೀಶ ಪವಾರ, ಸಚಿನ ಮಸಳಿ, ಮಂಥನ ಗಾಯಕವಾಡ, ಸಂದೇಶ ಶಿರೂರ, ಶರಣು ಇನ್ನಿತರರು ಉಪಸ್ಥಿತರಿದ್ದರು.