ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಬಾಳಿ

ವಾಡಿ: ಜೂ:6:ಜಗತ್ತು ಕೊರೊನಾ ಸೊಂಕಿನಿಂದ ತತ್ತರಿಸುತ್ತಿದೆ. ಎಲ್ಲೆಡೆ ಆಮ್ಲಜನಕದ ಕೊರತೆಯಿಂದ ಪ್ರಾಣಪಕ್ಷಿ ಹಾರುತ್ತಿದೆ. ಪರಿಸರ ಇದ್ದರೇ ಮಾತ್ರ ಭೂಮಿ ಮೇಲೆ ಬದುಕಿರಲು ಸಾಧ್ಯ. ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಿಕ್ಷಕ ಸಿದ್ದಲಿಂಗ ಬಾಳಿ ಅಭಿಪ್ರಾಯಿಸಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶ್ರೀಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಅಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಾ,

ಹಸಿರೆ ಉಸಿರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ, ಪ್ರಪಂಚದಾದ್ಯಂತ ಪರಿಸರವನ್ನು ನಾಶ ಮಾಡಿ ಕಾಂಕ್ರೀಟ ಕಾಡನ್ನು ನಿರ್ಮಿಸುತ್ತಿರುವುದರಿಂದ ನಾವು ಕೆಲವೇ ವರ್ಷಗಳಲ್ಲಿ ವಿನಾಶದ ಹಾದಿಯನ್ನು ತುಳಿಯಲಿದ್ದೇವೆ.

ನಗರೀಕರಣ, ಕೈಗಾರಿಕಿಕರಣದಿಂದ ಪರಿಸರವು ನಾಶವಾಗುತ್ತಿದೆ. ಮನುಷ್ಯನ ವಿನಾಶಕ್ಕೆ ನಾವೇ ಅಹ್ವಾನ ನೀಡುತ್ತಿದ್ದೆವೆ, ದಯವಿಟ್ಟು ಪ್ರತಿಯೊಬ್ಬರು ಕನಿಷ್ಠ ಒಂದೊಂದು ಗಿಡವನ್ನು ನೆಟ್ಟು ಪ್ರಕೃತಿಗೆ ನಮ್ಮ ಕಾಣಿಕೆಯನ್ನು ನೀಡೋಣ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಮುಖಂಡ ಸೂಂiÀರ್iಕಾಂತ ಬಾಳಿ ಸಸಿ ನೆಡುವುದರ ಮೂಲಕ ಉಧ್ಘಾಟಿಸಿದರು. ಶಾಂತು ಬಾಳಿ. ಶಿವಕುಮಾರ ಸರಡಗಿ, ಈಶಪ್ಪ ಇಂಗಳಗಿ, ಕುಮಾರಸ್ವಾಮಿ, ವಿಶಾಲ ಸುತ್ರಾವೆ, ಶರಣು ಬಾಳಿ ಉಪಸ್ಥಿತರಿದ್ದರು.