ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ

ಚನ್ನಮ್ಮನ ಕಿತ್ತೂರ,ಆ6: ಗಿಡ ನೆಟ್ಟು ಬೆಳೆಸುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದರಿಂದ ಪರಿಸರÀ ರಕ್ಷಣೆಯಾಗುತ್ತದೆ. ಪರಿಸರವಿಲ್ಲದೇ ಮಾನವನ ಬದುಕು ಅಸಾಧ್ಯವೆಂದು ಶಾಸಕ ಮಹಾಂತೇಶ ದೊಡ್ಡಗೌಡ ಹೇಳಿದರು.
ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬೀಡಿ ಕ್ರಾಸ್ ಹತ್ತಿರದ ಸರ್ಕಾರಿ ಪಧವಿ ಪೂರ್ವ ಕಾಲೇಜ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು ಅರಣ್ಯ ನಾಶದಿಂದ ಪರಿಸರ ಹಾಳಾಗುತ್ತದೆ. ಆದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಹೆಚ್ಚು-ಹೆಚ್ಚು ಗಿಡ ನೆಡುವುದರ ಜೊತೆಗೆ ಪಾಲನೆ ಪೋಷಣೆ ಮಾಡಿ ಅರಣ್ಯ ಬೆಳಸಿ ನಾಡನ್ನು ರಕ್ಷಿಸಬೇಕೆಂದು ಕರೆ ನೀಡಿದರು.
ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿ ವಾಣಿಶ್ರೀ ಹೆಗಡೆ ಮಾತನಾಡಿ ಸಾಮಾಜಿಕ ವಲಯದಲ್ಲಿ ನಾವು ನಿವೇಲ್ಲರೂ ಜೊತೆಗೂಡಿ ಗಿಡ ನೆಟ್ಟ ಮೇಲೆ ಅವುಗಳನ್ನು ಬೆಳೆಸುವ, ಜವಾಬ್ದಾರಿ ನಮ್ಮ ನಿಮ್ಮಲ್ಲರದ್ದಾಗಿದೆ. ಪರಿಸರ ಉಳಿಯಬೇಕಾದರೆ ಅರಣ್ಯ ಮುಖ್ಯ. ಅದನ್ನು ಉಳಿಸಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಈ ಸಮಯದಲ್ಲಿ ಬೈಲಹೊಂಗಲ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುರೇಶ ದೊಡ್ಡಬಸನ್ನವರ, ಕಿತ್ತೂರ ಉಪವಲಯ ಅರಣ್ಯಾಧಿಕಾರಿ ಸಜೀವ ಮಗದುಮ, ಸಕ್ಕರಗೌಡ ಪಾಟೀಲ, ತಾ.ಪಂ. ಮಾಜಿ ಸದಸ್ಯ ದಿನೇಶ ಒಳಸಂಗ, ಪ,ಪಂ ಸದಸ್ಯರು, ಡಿಗ್ರಿ ಕಾಲೇಜ ಪ್ರಾಶಂಪಾಲ, ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿದ್ದರು.