ಬೀದರ್:ಜೂ.6: ನಮ್ಮ ಪೂರ್ವಜರು ನಮಗೆ ಬಿಟ್ಟು ಹೋದ ಹಾಗೆ ನಾವು ನಮ್ಮ ಮುಂದಿನ ಜನಾಂಗಕ್ಕೆ ಪರಿಸರವನ್ನು ಬಿಟ್ಟು ಹೊಗಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶೀಲ್ಪಾ .ಎಂ ಹೇಳಿದರು.
ಅವರು ಸೋಮವಾರ ಬೀದರ ತಾಲ್ಲೂಕಿನ ಜನವಾಡ ಗ್ರಾಮದಲ್ಲಿ ಅಮೃತ ಯೋಜನೆ ಅಡಿ ನಿರ್ಮಾಣ ಮಾಡಲಾಡ ಜನವಾಡ ಕೆರೆಯ ಹತ್ತಿರ ಆಯೋಜಿಸಿದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಮಾಲಿನ್ಯದಿಂದ ಜಾಗತಿಕ ತಾಪಮಾನ ಹೆಚ್ಚುತ್ತದೆ ಆದರಿಂದ ನಾವು ಪರಿಸರಕ್ಕೆ ಹಾನಿಕಾರಕವಾದ ವಸ್ತುಗಳನ್ನು ಬಳಕೆ ಮಾಡಬಾರದು ಎಂದು ಹೇಳಿದರು.
ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಯ ಹೊಣೆ ನಮ್ಮ ಮೇಲಿದೆ ಆದರಿಂದ ನಾವೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕೆಂದರು
ಉಪ ಅರಣ್ಯ ಸಂರಕ್ಷನಾಧಿಕಾರಿ ಅಣ್ಣಾರಾವ ಬಿ ಪಾಟೀಲ್
ಮಾತನಾಡಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಆದಷ್ಟು ತಮ್ಮ ಮನೆಯ ಸುತ್ತಮುತ್ತಲು ಸಸಿ ನೆಡ ಬೇಕು ಇದರಿಂದ ನಾವು ಶುದ್ದ ಗಾಳಿ ಪಡೆಯಲು ಸಾಧ್ಯ ಎಂದು ಹೇಳಿದರು.
ಇತ್ತೀಚೆಗೆ ಹಾನಿಕಾರಕ ರಸಗೊಬ್ಬರ ಬಳಕೆಯಿಂದ ಮಣ್ಣಿನ ಸವಕಳಿಯು ನಶಿಸುತ್ತಿದೆ ಆದರಿಂದ ಹಾನಿಕಾರ ರಸಗೊಬ್ಬರವನ್ನು ಯಾರು ಬಳಸಬಾರದು ಎಂದರು
ತಾಲ್ಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಮತ್ತು
ಜನವಾಡ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಸವಿತಾ ಹಿರೆಮಠ ನರೇಗ ಯೋಜನೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೀದರ ತಾಲ್ಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್, ತಾಂತ್ರಿಕ ಅಭಿಯಂತರದ ನಿರಂಜನ್,ಆರ್.ಎಪ್. ಓ. ಪ್ರೇಮಕುಮಾರ, ಎಸಿಎಫ್ ಮುಜೀಬುದ್ದಿನ್, ಪ್ರಾದೇಶಿಕ ಅರಣ್ಯ ವಲಯ ಆರ್.ಎಫ್.ಓ ಮಹೇಂದ್ರ, ಅರಣ್ಯ ತಾಂತ್ರಿಕ ಸಂಯೋಜಕ ನಿರಂಜನ,ಐಇಸಿ ಸಂಯೋಜಕ ಸತ್ಯಜೀತ ಹಾಗೂ ಶಾಹಿನ್ ಕಾಲೇಜಿನ ವಿಧ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.