ಸಂಜೆವಾಣಿ ವಾರ್ತೆ
ಕುಕನೂರು, ಜೂ.08: ತಾಲೂಕಿನ ತಳಕಲ್ ಗ್ರಾಮದ ಬಸ್ ಸ್ಟಾಂಡ್ ಆವರಣದಲ್ಲಿ ಕುಕನೂರ್ ಸಾರಿಗೆ ಡಿಪೋ ಹಾಗೂ ತಳಕಲ್ ಕಂಟ್ರೋಲರ್ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸಹಯೋಗದಲ್ಲಿ. ವಿಶ್ವ ಪರಿಸರ ದಿನ ದ ನೆನಪಿಗಾಗಿ ಅನೇಕ ಸಸಿ ಗಳನ್ನು ನೆಟ್ಟು.. ನೀರು ಹಾಕಿ.. ಪರಿಸರ ದಿನ ವನ್ನು ಆಚರಣೆ ಮಾಡಲಾಯಿತು. ಈ ಸಂದಭ೯ದಲ್ಲಿ. ಪರಿಸರ ವಾದಿ ಶಿವಣ್ಣ ರಾಯರೆಡ್ಡಿ ಮಾತನಾಡಿ, ದೇಶದಲ್ಲಿ ಪರಿಸರ ಸಂಪೂರ್ಣ ಉಲ್ಟಾ ಪಲ್ಟಾ ಆಗಿಹೋಗಿದೆ,. ಶುದ್ಧ ಗಾಳಿ. ತಂಗಾಳಿ.. ಇಲ್ಲದಾಗಿದೆ. ಇದಕ್ಕೆ ನಾವೇ ಜವಾಬ್ದಾರರು . ನಮ್ಮ ಹೊಣೆಗೇಡಿ ಅಧಿಕಾರಿ ಗಳು..ಹಾಗೂ ಸೋಮಾರಿ ರಾಜಕಾರಣಿ ಗಳು.. ಸಡಿಲ ಕಾನೂನೂ ಗಳು..ಜನರಲ್ಲಿ ಪರಿಸರದ ಬಗ್ಗೆ ಇರುವ ಬೇಜವಾಬ್ದಾರಿ ಕಾರಣ ವಾಗಿದೆ… ಇದರ ಫಲ ವನ್ನು ಮುಂದೆ ಖಂಡಿತ ನಾವೂ ಉಣ್ಣುತ್ತೇವೆ… ಇನ್ನೂ ಮುಂದಿನ ಹತ್ತು ವರ್ಷದಲ್ಲಿ ಭೀಕರ ಬಿಸಿಲು.. ಮತ್ತು ನೀರಿನ ಅಭಾವ ವನ್ನು ಏದುರಿಸಬೇಕಾಗುತ್ತದೆ..ಇದರ ಅರಿವು ಜನರಲ್ಲಿ.. ಸರಕಾರ ದಲ್ಲಿ. ಅಧಿಕಾರಿ ಗಳಲ್ಲಿ..ಕೂಡಲೇ ಬರಬೇಕಾಗುತ್ತದೆ… ಕೇವಲ ಈ ಒಂದು ದಿವಸ ಪರಿಸರ ದಿನ ಆಚರಣೆ ಮಾಡದೇ 365 ದಿವಸ ಇದನ್ನು ಕಡ್ಡಾಯವಾಗಿ ಸರಕಾರ ಜಾರಿ ಮಾಡಬೇಕು… ಖಾಲಿ ಮಂತ್ರ ಕ್ಕೆ ಮಾವಿನ ಕಾಯಿ ಉದುರುವದಿಲ್ಲ…ಬಿಗಿ ಕಾನೂನೂ ಬರಬೇಕು..ಸರಕಾರಿ ಆಫೀಸಿಗೆ. ಸರಕಾರಿ ಅಧಿಕಾರಿ ಗಳ ನಿವಾಸ ಕ್ಕೆ…ರಾಜಕಾರಣಿ ಗಳ ನಿವಾಸ ಕ್ಕೆ ಕಟ್ಟಿಗೆ ಬಳಕೆ ಸಂಪೂರ್ಣ ನಿಷೇದ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂಧಭ ೯ದಲೀ ಅನೇಕ ಗಣ್ಯರು ಹಾಜರಿದ್ದರು.