ಪರಿಸರ ಮಾಲಿನ್ಯ ಮನುಕುಲಕ್ಕೆ ಮಾರಕವಾಗುತ್ತಿದೆ

 ಚಿತ್ರದುರ್ಗ. ಡಿ.೩; ಪರಿಸರದಲ್ಲಿ ಇಂದೂ ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ, ಹೆಚ್ಚಾಗುತ್ತದ್ದು, ಮನುಷ್ಯನ ಅತಿಯಾಸೆ, ಏರುತ್ತಿರುವ ಜನಸಂಖ್ಯೆ, ವೈಭವಯುತ ಜೀವನದ ಬಯಕೆಗಳು, ಪರಿಸರವನ್ನು ಹಾಳು ಮಾಡುತ್ತಿವೆ ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಭೂಮಿ ಎಲ್ಲವೂ ಇಂದು ಅತಿಹೆಚ್ಚು ಕಲುಷಿತಗೊಳ್ಳುತ್ತಿದೆ. ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಏಕಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಡಿಸಿ ವೃತ್ತದ ಬಳಿ ರೋಟರಿ ಕ್ಲಬ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ರೋಟರಿ ವಿದ್ಯಾಶಾಲೆ ಸಂಯುಕ್ತವಾಗಿ ಆಯೋಜಿಸಿದ್ದ “ರಾಷ್ಟಿçÃಯ ಮಾಲಿನ್ಯ ನಿಯಂತ್ರಣ ದಿನದ” ಪ್ರಯುಕ್ತ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು ಮಾಲಿನ್ಯ ಹೆಚ್ಚಾಗಲು ಕಾರಣ ಜ್ವಾಲಾಮುಖಿಗಳು, ಮನುಷ್ಯನಿರ್ಮಿತ ಕೈಗಾರಿಕೆಗಳು, ವಾಹನಗಳ ಹೆಚ್ಚಳ, ಹೆಚ್ಚುತ್ತಿರುವ ಜನವಸತಿ, ಅರಣ್ಯನಾಶ, ಅತಿಯಾದ ಶಬ್ದಮಾಲಿನ್ಯ, ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿವೆ. ಹೆಚ್ಚಾದ ವಾಹನಗಳ ದಟ್ಟಣೆ, ಕೈಗಾರಿಕೆ ಯಂತ್ರಗಳು, ಧ್ವನಿವರ್ಧಕಗಳು, ಶಬ್ದ ಮಾಲಿನ್ಯವನ್ನುಂಟು ಮಾಡುತ್ತಿವೆ. ಇಂದು ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದರು,ಪರಿಸರ ಮಾಲಿನ್ಯ ಇಂದು ಕೇವಲ ಮನುಕುಲಕ್ಕೆ ಅಷ್ಟೇ ಅಲ್ಲದೆ, ಇಡೀ ವಿಶ್ವದ ಜೀವ ಸಂಕುಲಕ್ಕೆ ಮಾರಕವಾಗುತ್ತಿವೆ ಆರೋಗ್ಯಕರ ಜೀವನಕ್ಕೆ ಅತ್ಯಗತ್ಯವಾದ ಗಾಳಿ, ನೀರು, ಆಹಾರ, ವಿಷಪೂರಿತವಾಗುತ್ತಿದೆ. ಗಾಳಿಯಿಲ್ಲದೆ ಒಂದು ಕ್ಷಣವೂ ನಾವು ಬದುಕಲಾರೆವು, ಭೂಮಿಯ ಮೇಲೆ ಇರಲು ಸಾಧ್ಯವೇ ಇಲ್ಲ ಎಂದರು.ರೋಟರಿ ಕ್ಲಬ್ ಅಧ್ಯಕ್ಷರಾದ ರಾಜೇಶ್ವರಿಸಿದ್ದರಾಂ ಮಾತನಾಡುತ್ತಾ ಪರಿಸರ ಮಾಲಿನ್ಯವೂ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಸ್ತಮಾ, ಉಬ್ಬಸ, ಕ್ಯಾನ್ಸರ್, ಕಾಲರಾ ಅತಿಸಾರ ಕಾಮಾಲೆಗಳು ಉಲ್ಬಣಿಸುತ್ತದೆ. ಓಝೋನ್ ಪದರ ನಾಶದಿಂದ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ, ಚರ್ಮ ಕ್ಯಾನ್ಸರ್ ಕಣ್ಣಿನ ತೊಂದರೆಗಳಿಗೆ ಕಾರಣವಾಗುತ್ತದೆ ಎಂದರು.ಕಾರ್ಯದರ್ಶಿ ಸವಿತಾ ನಾಗೇಶ್ ಮಾತನಾಡುತ್ತಾ ಆಮ್ಲ ಮಳೆಯು ಕೂಡ ಪರಿಸರದ ಮಾಲಿನ್ಯದ ಕಾರಣದಿಂದಲೇ ಆಗುತ್ತಿದೆ, ಇದರಿಂದ ಅನೇಕ ಸ್ಮಾರಕಗಳು ಕಟ್ಟಡಗಳು ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಕಾಡಿನ ನಾಶದಿಂದ ಹಸಿರುಮನೆ ಪರಿಣಾಮ ಉಂಟಾಗಿ, ಇಂಗಾಲದ ಡೈ ಆಕ್ಸೆöÊಡ್ ಮತ್ತು ಮಿಥೇನ್‌ಗಳು ಭೂಮಿಯ ಉಷ್ಣತೆ ಮೆಚ್ಚಿಸಲು ಕಾರಣವಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ರೋ. ಲಕ್ಷ÷್ಮಣ್, ರೋ. ಚಂದ್ರಶೇಖರಯ್ಯ, ರೋಟರಾಕ್ಟ್ ಯಶವಂತ್, ಸಹಶಿಕ್ಷಕರಾದ ಉಮೇಶ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಎಚ್.ಎಸ್. ರಚನಾ ಕಾರ್ಯಕ್ರಮದಲ್ಲಿ ಪರಿಸರ ಗೀತೆಗಳನ್ನ ಹಾಡಿ ರಂಜಿಸಿದರು. ಸೈಕಲ್ ಬಳಸಿ, ಪರಿಸರ ಉಳಿಸಿ, ಇಂಧನ ಉಳಿಸಿ ,ಮಾಲಿನ್ಯ ತಡೆಯಿರಿ ಎಂಬ ಘೋಷಣೆಗಳನ್ನು ಕೂಗುತ್ತಾ, ಸೈಕಲ್‌ಗಳನ್ನ ಪ್ರದರ್ಶಿಸಲಾಯಿತು. ಪರಿಸರ ಸಂ¨ÀAಧಿ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.