ಪರಿಸರ ಮಾಲಿನ್ಯದಿಂದ ಮಳೆ ಕಡಿಮೆಯಾಗುತ್ತಿದ್ದು, ಆತಂಕಕಾರಿ ಸಂಗತಿಃ ಡಾ.ಪ್ರಕಾಶ ಮೂಡಲಗಿ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಿಂದಗಿ, ಜೂ.7-ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ ನಗರೀಕರಣ ಪರಿಸರ ಮಾಲೀನ್ಯ ದಿನೇ ದಿನೇ ಅದರೊಂದಿಗೆ ಹೆಚ್ಚುತ್ತಿದೆ ಕ್ರಮೇಣವಾಗಿ ಮಳೆ ಕಡಿಮೆಯಾಗುತ್ತಿದ್ದು, ಇದು ಆತಂಕಕಾರಿ ಸಂಗತಿ ಎಂದು ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಡಾ.ಪ್ರಕಾಶ ಮೂಡಲಗಿ ಹೇಳಿದರು.
ಪಟ್ಟಣದ ಕರ್ನಾಟಕ ಜನಸ್ಪಂದನ ಕಾರ್ಯಾಲಯದ ಆವರಣದಲ್ಲಿ ಸಸಿನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯವಾಗಿ ಚಾಲನೆ ನೀಡಿ ಅವರು ಮಾತನಾಡಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ಸಿಂದಗಿ ನಗರದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುತ್ತದೆ ಇವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ದಿನದಿಂದ ಪ್ರತಿಯೊಬ್ಬರು ಪ್ರತಿ ವರ್ಷಕ್ಕೆ ಪ್ರತಿ ಬಡಾವಣೆಯಲ್ಲಿ ಮನೆಯ ಮುಂದೆ ರಸ್ತೆ ಬದಿಗಳಲ್ಲಿ ಸಸಿನೆಡುವುದರಿಂದ ಕಾಲಕ್ಕೆ ತಕ್ಕಂತೆ ಮಳೆ ಬೆಳೆ ಸುಗುಮವಾಗುತ್ತದೆ. ಸಸಿಗಳನ್ನು ನೆಡುವುದರಿಂದ ಜಾಗತಿಕ ತಾಪಮಾನ ಕಡಿಮೆ ಯಾಗುತ್ತದೆ. ಮುಂದಿನ ಪೀಳಿಗೆಯು ಅಪಾಯಕ್ಕೀಡಾಗದಂತೆ ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ ಮಾತನಾಡಿ, ಪ್ರತಿಯೊಬ್ಬರೂ ಹುಟ್ಟು ಹಬ್ಬ ಮತ್ತು ಶುಭ ಸಂದರ್ಭದಲ್ಲಿ ಅದರ ಸವಿನೆನಪಿಗಾಗಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಮತ್ತು ಪರಿಸರ ರಕ್ಷಣೆಯು ನಮ್ಮ ಆದ್ಯ ಕರ್ತವ್ಯ. ಹಸಿರು ಉಳಿಸಲು ಗಿಡ ಮರ ಬೆಳೆಸಲು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ವಿನೂತನ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸುತ್ತಿರುವುದು ಮಾದರಿಯಾಗಬೇಕು ಹುಟ್ಟು ಹಬ್ಬವನ್ನು ಹಲವಾರು ಜನ ಪಾರ್ಟಿಗಳು ಮಾಡುತ್ತ ಅನಗತ್ಯ ಖರ್ಚು ಮಾಡುತ್ತಾರೆ. ಇದರ ಬದಲಾಗಿ ಗಿಡಗಳನ್ನು ನೆಡುವ ಮೂಲಕ ತನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಸಿದ್ಧಲಿಂಗ ಕಿಣಗಿ, ಪ್ರದೀಪ ಕತ್ತಿ, ಬಸವರಾಜ ಗುರುಶೆಟ್ಟಿ, ತಾಲೂಕಾಧ್ಯಕ್ಷ ನವೀನ ಶೆಳ್ಳಗಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ರವಿಚಂದ್ರ ಮಣೂರ, ಪ್ರಧಾನ ಸಂಚಾಲಕ ಭಾಗಣ್ಣ ತಮದೊಡ್ಡಿ, ಕಾರ್ಯಾಧ್ಯಕ್ಷ ಶರಣಪ್ಪ ಮೇತ್ರಿ, ಉಪಾಧ್ಯಕ್ಷ ದಯಾನಂದ ಜಾಡರ್, ಕಲ್ಮೇಶ ಹಿಪ್ಪರಗಿ, ಶಿವರಾಯಗೌಡ ಖೈನೂರ, ಶಿವಾನಂದ ಮುಡಸಿ, ಆನಂದ ಚಿಮ್ಮಲಗಿ, ಬಸವರಾಜ ದೇಸಾಯಿ, ಸಾಹೇಬಗೌಡ ದುದ್ದಗಿ, ಗುರು ಕಡಣಿ, ಮಲ್ಲು ಹೊಸಮನಿ, ಕಾಶೀಪತಿ ಬಡಿಗೇರ್, ಮೌನೇಶ ಬಡಿಗೇರ್, ಲಕ್ಷ್ಮಣ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.