ಪರಿಸರ ಮರುಸ್ಥಾಪನೆಗೆ ಪ್ರತಿಯೊಬ್ಬರೂ ಕಾಡು ಬೆಳೆಸಬೇಕಾದ ಅವಶ್ಯಕತೆ:ಶಿವ ಅಷ್ಠಗಿ

ಕಲಬುರಗಿ: ಜೂ.5 :ಮನೆಗೊಂದು ಮರ ಊರಿಗೊಂದು ವನ, ಪರಿಸರ ಮರುಸ್ಥಾಪನೆ ಎಂಬ ಘೋಷವಾಕ್ಯ ದಡಿಯಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಮಂದಿನ ಪೀಳಿಗೆಗೆ ಅತ್ಯುತ್ತಮ ಪರಿಸರ ನಿರ್ಮಾಣ ಮಾಡುವುದರ ಮೂಲಕ ಪರಿಸರವನ್ನು ಮರುಸ್ಥಾಪನೆ ಮಾಡಬೇಕಾಗೆದೆ ಎಂದು ಬಿಜೆಪಿ ಯುವ ಮೋರ್ಚಾ ಕಲಬುರಗಿ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಅಭಿಪ್ರಾಯಪಟ್ಟರು.
ಅವರು ಮಕ್ಕಳೊಂದಿಗೆ ಸಸಿಗಳನ್ನು ನೆಟ್ಟು ಮಕ್ಕಳಿಗೂ ಕೂಡ ಪರಿಸರದ ಬಗ್ಗೆ ಕಾಳಜಿ ವಹಿಸಲು ಹೇಳಿದರು. ಇಂದು ವಿಶ್ವ ಪರಿಸರ ದಿನದ ಅಂಗವಾಗಿ ದಿನದ 24 ಗಂಟೆಯೂ ಆಮ್ಲಜನಕ ನೀಡುವ ಅರಳಿ ಮರ (ಭೋಧಿವೃಕ್ಷ) ವನ್ನು ನೇಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ವಿಶಿಷ್ಟವಾಗಿ ಮಕ್ಕಳೊಂದಿಗೆ ಆಚರಿಸಿದರು.
ಈ ಸಂದರ್ಭದಲ್ಲಿ ಅಶುತೋಷ ಅಷ್ಠಗಿ ,ಅನಿರುದ್ಧ ಅಷ್ಠಗಿ, ಅನುಷ್ಕಾ ಅಷ್ಠಗಿ, ಆರಾಧ್ಯ ಅಷ್ಠಗಿ ಮತ್ತು ಆರುಷ್ ಅಷ್ಠಗಿ ಸೇರಿದಂತೆ ಇತರರಿದ್ದರು.