ಪರಿಸರ ಬೆಳವಣಿಗೆಯಲ್ಲಿ ಸರ್ವರ ಪಾತ್ರ ಅಗತ್ಯ : ನಫಿಸಾಬೇಗಂ

ಶಹಾಪೂರ:ಜೂ.10:ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗುವುದರ ಜೊತೆಗೆ ಗಿಡಮರಗಳನ್ನು ಬೆಳೆಸುವಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಕಾರ್ಯನಿರ್ವಹಿಸಬೆಕಾಗಿದೆ ಎಂದು ಬಸವಪ್ರಭು ತರಬೇತಿ ಕೇಂದ್ರದ ತರಬೇತುದಾರರಾದ ನಫಿಸಾಬೇಗಂ ಹೆಳಿದರು. ರಂಗಂಪೇಟೆಯ ಬಸವಪ್ರಭು ಸಮರ್ಥ ಹೋಲಿಗೆ ತರಬೇತಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚಾರಣೆಯ ಅಂಗವಾಗಿ ಅಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ರಂಗಂಪೇಟ ವತಿಯಿಂದ ಆಯೋಜಿಸಿದ್ದ ಸಸಿ ನಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೈಗಾರಿಕರಣ ಮತ್ತು ನಗರಿಕರಣದ ಬೆಳವಣಿಗೆಯಿಂದ ಪರಿಸರಕ್ಕೆ ದಕ್ಕೆಯಾಗುತ್ತಿದೆ ಈ ಭಾಗದ ಜನ ಸಾಮಾನ್ಯರಲ್ಲಿ ಪರಿಸರದ ಪಾತ್ರ ಕುರಿತು ಜಾಗೃತಿ ಮೂಡುವುದು ಅತ್ಯಂತ ಅವಶ್ಯಕವಾಗಿದ್ದು ಪ್ರತಿಯೊಬ್ಬರು ತಮ್ಮ ಸುತ್ತ-ಮುತ್ತಲಿನ ಪ್ರದೆಶಗಳಲ್ಲಿ ಗೀಡ, ಮರ ಸಸಿಗಳನ್ನು ನಟ್ಟು ಪರಿಸರ ಕ್ರಾಂತಿ ಮಾಡಿದಾಗ ಮಾತ್ರ ಉತ್ತಮ ವಾತಾವರಣ, ಮಳೆ, ಬೆಳೆ ಜೊತೆಗೆ ಸರ್ವತೊಮುಖ ಸಮೃದ್ಧಿ ಕಾಣಲು ಸಾದ್ಯವಾಗುತ್ತದೆ ಎಂದು ಹೆಳಿದರು. ಸಂಸ್ಥೆಯ ಕಾರ್ಯದರ್ಶಿ ರೇಣುಕಾ ನಾಯಕ, ಪ್ರಮುಖರಾದ ವಿಜಯಲಕ್ಷ್ಮೀ, ಜ್ಯೋತಿ, ರೇಷ್ಮಾ, ಭಾರತಿ ಸೇರಿದಂತೆ ಇತರರಿದ್ದರು, ಪರಿಸರ ದಿನಾಚಾರಣೆಯ ಅಂಗವಾಗಿ ತರಬೇತುದಾರರಿಗೆ ಉಚಿತವಾಗಿ ಸಸಿ ವಿತರಿಸಲಾಯಿತು.