ಪರಿಸರ ಪ್ರೇಮಿ ಬಸವರಾಜ ಪೂಜಾರಿಗೆ ಸಂದ ಗೌರವ

ಸಿರವಾರ,ಜೂ.೦೯-
ಪಟ್ಟಣದ ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ ಬಸವರಾಜ ಪೂಜಾರಿ ಅವರ ಪರಿಸರ ಪ್ರೀತಿ ಯನ್ನು ಗುರುತಿಸಿ ಮಾನ್ವಿ ಯ ದಿ.ರಾಜಾ ಹನುಮಪ್ಪ ನಾಯಕ ದೊರೆ ಫೌಂಡೇಶನ್ ಮತ್ತು ಆರ್‌ವಿಎನ್ ಗ್ರೂಪ್ ವತಿಯಿಂದ ಸನ್ಮಾನಿಸಲಾಗಿದೆ.
ಬಸವರಾಜ ಪೂಜಾರಿ ಸಿರವಾರ-ಮಾನ್ವಿ ತಾಲೂಕುಗಳಲ್ಲಿ ತಮ್ಮ ಪರಿಸರ ಸ್ನೇಹಿ ಕಾರ್ಯಗಳಿಂದಲೇ ತಕ್ಕಮಟ್ಟಿಗೆ ಖ್ಯಾತಿ ಗಳಿಸಿದವರು. ಸ್ಥಳೀಯ ಕೈಗೆಟಕುವ ಕೌಶಲಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ ಕೆಲಸದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.
ನಿಸ್ವಾರ್ಥವಾಗಿ ಗಿಡಗಳನ್ನು ಸಲುಹುವ ಮೂಲಕ ಪೂಜಾರಿ ಅವರು, ಜನಮನ್ನಣೆಯ ಪರಿಸರ ಪ್ರೇಮಿಯಾಗಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ನಮ್ಮೊಂದಿಗಿರುವುದು ನಮ್ಮ ಭಾಗ್ಯ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಾರೆ.
ದಿ.ರಾಜಾ ಹನುಮಪ್ಪ ನಾಯಕ ದೊರೆ ಫೌಂಡೇಶನ್ ಮತ್ತು ಆರ್‌ವಿಎನ್ ಗ್ರೂಪ್ ವತಿಯಿಂದ ಪ್ರತಿವರ್ಷ ಸಹಸ್ರಾರು ಉಚಿತ ಸಸಿ ವಿತರಿಸಿ ಹಾಗು ಪರಿಸರದ ಕಾಳಜಿಯುಳ್ಳ ಮಹನೀಯರನ್ನು ಗೌರವಿಸುತ್ತದೆ.
ನಾನು ಮಾಡುವ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಅರಣ್ಯ ಇಲಾಖೆ ಅಲ್ಲಲ್ಲಿ ಗಿಡ ನೆಡುವ ಕಾರ್ಯ ಮಾಡುತ್ತಿದೆ. ಅವುಗಳನ್ನು ಪೋಷಿಸಿದಾಗ ಮಾತ್ರ ಪರಿಸರ ಉಳಿಯಲು ಸಾದ್ಯ. ನನ್ನ ಈ ಕೆಲಸವನ್ನು ಗುರುತಿಸಿದ ಸಂಸ್ಥೆಗೆ ಧನ್ಯವಾದಗಳು ಎಂದು ಬಸವರಾಜ ಪೂಜಾರಿ ಹೇಳಿದರು.