ಪರಿಸರ ಪ್ರೇಮಿಯಿಂದ ನೊಂದವರಿಗೆ ನೆರವು

ದಾವಣಗೆರೆ. ಮೇ.೩; ನಗರದ ಎಂಸಿಸಿಬಿ ಬ್ಲಾಕಿನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊರೋನ ಪ್ರಯುಕ್ತ ನಿರ್ಗತಿಕರಿಗೆ, ಬಡವರಿಗೆ, ಹಸಿದವರಿಗೆ, ಅನ್ನಪ್ರಸಾದ ಸೇವೆಯನ್ನು ದಿನನಿತ್ಯ ನೀಡಲಾಗುತ್ತಿದೆ.ಈ  ಒಂದು ಕಾರ್ಯಕ್ರಮವನ್ನು ದಾವಣಗೆರೆಯ ಪರಿಸರಪ್ರೇಮಿ,  ಕನ್ನಡ ಪರ ಹೋರಾಟಗಾರರಾದ ಗೋಪಾಲಗೌಡರು ಆಯೋಜಿಸಿದ್ದಾರೆ.
ಈ ವೇಳೆ ಸ್ವಯಂ ಸೇವಕರಾದ ಜಗದೀಶ್ ಕುಮಾರ್ ಮುರಳೀಧರ ಆಚಾರ್ಯ ಪ್ರಧಾನ ಅರ್ಚಕರಾದ ರವೀಂದ್ರ ಭಟ್, ಮಂಜುನಾಥ್, ಕಿರಣ್ ಅನೇಕರು ಪಾಲ್ಗೊಂಡಿದ್ದರು ಎಂದು ದೇವಸ್ಥಾನದ ಪ್ರಧಾನ ಟ್ರಸ್ಟಿಗಳಾದ  ರಾಮ್ ಮೋಹನ್,ಎನ್ ತಿಳಿಸಿದ್ದಾರೆ.