ಕೋಲಾರ,ಜೂ,೮- ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಪರಿಸರ ಪ್ರೇಮ, ಪ್ರಜ್ಞೆ ಮೂಡಿ ಬರಬೇಕು, ಪರಿಸರ ಸ್ನೇಹಿಯಾದ ಅರಳಿಮರ ಹೊಂಗೆ, ಬೇವು, ಮಾವು, ತಮ್ಮಗಳ ಶಾಲಾ ಆವರಣದಲ್ಲಿ, ಹೊಲಗಳ ಬದುಗಳಲ್ಲಿ ಬೆಳೆಸಿದರೆ ಪರಿಸರ ಸಂರಕ್ಷಣೆ ಜೊತೆಗೆ ಮಣ್ಣಿನ ಸವೆತವನ್ನು ತಡೆಗಟ್ಟಿ ಮಾಲಿನ್ಯವನ್ನು ನಿಯತ್ರಿಂಸಬಹುದು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಡಂ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, “ಪರಿಸರ” ಇದು ೪ ಅಕ್ಷರ “ಪರಿ” ಎಂದರೆ ಸುತ್ತಲೂ “ಸರ” ಎಂದರೆ ಇರುವ ಅಂದರೆ ನಮ್ಮಗಳ ಸುತ್ತಲೂ ಇರುವ ಇಲ್ಲಿನ ನೆಲ ನೀರು ಗಾಳಿ ಭಾಗಿದ ಬಾನು, ಅಗ್ನಿ, ಎಂದರ್ಥ ಈ -ಪಂಚಭೂತಗಳಾದ ಭೂಮಿ, ವಾಯು, ಅಗ್ನಿ, ನೀರು ಆಕಾಶ, ಈ ದಾತುಗಳಿಂದ ಪ್ರಪಂಚ ಸೃಷ್ಟಿ ,ಈ ಪಂಚಭೂತಗಳ ಸಹಕಾರದಿಂದ ಭೂಮಂಡಲದ ಸಕಲ ಜೀವ ರಾಶಿಗಳು ಜೀವಂತ. ಪ್ರತಿಯೊಂದು ಜೀವಕ್ಕೂ ಈ ಪರಿಸರವೇ ಪೂರಕ, ಒಂದಕ್ಕೊಂದು ಜೈವಿಕ ಗಂಟು. ಮಾನವ ಪ್ರಾಣಿ ತನ್ನಲ್ಲಿನ ದುರಾಸೆಯಿಂದ ಪಂಚಭೂತಗಳನ್ನು ಮಲಿನ ಮಾಡುತ್ತಿದ್ದಾನೆ. ಇದು ಪ್ರಪಂಚದ ವಿನಾಶಕ್ಕೆ ದಾರಿಯಾಗಲಿದೆ ಎಂದರು.
ಪ್ರಕೃತಿದತ್ತವಾದ ಕಾಡನ್ನು ನಿರ್ನಾಮ ಮಾಡಿ ಕಾಂಕ್ರಿಟ್‌ನಾಡಿನ ನಿರ್ಮಾಣ ದಿನಿತ್ಯದ ಬಳಕೆಗಾಗಿ ಅಪರಿಮಿತ ಪ್ಲಾಸ್ಟಿಕ್ ಬಳಕೆ ವಾಯುಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳ ಸ್ಥಾಪನೆ, ಅರಣ್ಯ ನಾಶ ಮಾಡಿ ನಗರ-ಕೊಳಚೆ ಪ್ರದೇಶಗಳ ನಿರ್ಮಾಣ ಹೀಗೆ ಹತ್ತಾರು ಮೂಲಗಳಿಂದ ಪರಿಸರಕ್ಕೆ ಹಾನಿ ಮಾಡುವ ಮಾನವ ಜೀವಿ. ನಮ್ಮ ಪೂರ್ವಿಕರು “ಮನೆಗೊಂದು ಮರ ಊರಿಗೊಂದು ವನ” ಹಿಂದೆ ಗುಂಡುತೋಪು ನಿರ್ಮಿಸಿದ್ದರು. ಹೀಗಿನ ಆಧುನಿಕ ಮಾನವ ಅಕ್ರಮ ದಾಖಲೆಗಳನ್ನು ಸೃಷ್ಟಿಸಿಕೊಂಡು ಗುಂಡು ತೋಪುಗಳನ್ನೆ ನುಂಗಿ ಮಾಯ ಮಾಡಿದ್ದಾರೆ
ಪಕ್ಷಿ ಸಂಕುಲದ ಕಲರವ ಪ್ರಾಣಿಗಳ ಕೂಗು ಮಾಯವಾಗಿದೆ. ಸಸ್ಯ ಸಂಪತ್ತು ವೃದ್ದಿ ಪರಿಸರ ಕಾಳಜಿಯ ಅರಿವಿನ ಕೊರತೆ ನಮ್ಮ ವಿದ್ಯಾರ್ಥಿಗಳಲ್ಲಿ ಎದ್ದು ಕಾಣುತ್ತಿದ್ದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಪರಿಸರ ಪ್ರೇಮ, ಪ್ರಜ್ಞೆ ಮೂಡಿ ಬರಬೇಕು, ಪರಿಸರ ಸ್ನೇಹಿಯಾದ ಅರಳಿಮರ ಹೊಂಗೆ, ಬೇವು, ಮಾವು, ತಮ್ಮಗಳ ಶಾಲಾ ಆವರಣದಲ್ಲಿ, ಹೊಲಗಳ ಬದುಗಳಲ್ಲಿ ಬೆಳೆಸಿದರೆ ಪರಿಸರ ಸಂರಕ್ಷಣೆ ಜೊತೆಗೆ ಮಣ್ಣಿನ ಸವೆತವನ್ನು ತಡೆಗಟ್ಟಿ ಮಾಲಿನ್ಯವನ್ನು ನಿಯತ್ರಿಂಸಬಹುದು, ಅರಳಿಮರವೊಂದಿದ್ದರೆ ಸಾಕು ಟನ್‌ಗಟ್ಟಲೇ ಪ್ರಾಣ ವಾಯು ಆಮ್ಲಜನಕ ದೊರಕುತ್ತದೆ. ಅರಳಿಮರದ ಕೆಳಗೆ ಗೌತಮ ಬುದ್ದರು ತಪಸ್ಸು ಕುಳಿತು ಜ್ಞಾನೋದಯ ಪಡೆದುಕೊಂಡರು ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್.ಲಕ್ಷ್ಮೀನಾರಾಂiiಣರೆಡ್ಡಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್, ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರುಗಳು, ಉಪಾಧ್ಯಾಯ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದ ಸಮಾರಂಭಕ್ಕೆ ಕೆ.ಅನುಸೂಯ ಪ್ರಾರ್ಥನೆ ಮಾಡಿ, ಆದಿಬಯ್ಯಪ್ಪ ಸ್ವಾಗತ ಕೋರಿ, ಜಿ.ನಂದೀಶ್ ನಿರೂಪಿಸಿದರು.