ಪರಿಸರ ಪೋಷಣೆಯಿಂದ ಮಾತ್ರ ಮಾನವನ ಉಳಿವು : ಪ್ರೊ. ದಯಾನಂದ ಅಗಸರ

ಕಲಬುರಗಿ,ಜು.15: ಮಾನವನ ಉಳಿವು ಪರಿಸರ ಪೋಷಣೆಯಿಂದ ಮಾತ್ರವೇ ಸಾಧ್ಯ. ಮಾನವ ಸಂಕುಲ ಜೀವಂತಿಕೆಗೆ ಸ್ವಚ್ಛ ಮತ್ತು ಹಸಿರು ಪರಿಸರವೇ ಸಾಕ್ಷಿಯಾಗಿದೆ. ಆದರಿಂದ ಎಲ್ಲಾ ವಿದ್ಯಾರ್ಥಿಗಳು ಏರಡು ವಾರಗಳ ಕಾಲ ಜ್ಞಾನಗಂಗಾ ಆವರಣದಲ್ಲಿನ ವಿಭಾಗಗಳಲ್ಲಿನ ಸುತ್ತ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಹಸಿರು ವನ ಪೋಷಣೆಗೆ ಒತ್ತು ನೀಡಬೇಕಿದೆ ಎಂದು ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಇಂದು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿರುವ ‘ಸ್ವಚ್ಛ ಭಾರತ ಅಭಿಯಾನ’ ಅಡಿಯಲ್ಲಿ ಸ್ವಚ್ಛ, ಹಸಿರು ಮತ್ತು ಪ್ಲಾಸ್ಟಿಕ್ ಮುಕ್ತ ಆವರಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಬಗ್ಗೆ ಸಂದೇಶ ನೀಡಿದ ಅವರು ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಕರ ಪರಿಸರ ಸಿಗಲು ನಾವೆಲ್ಲರೂ ಇಂದಿನಿಂದ ಪರಿಸರ ಉಳಿವಿಗೆ ಶ್ರಮಿಸಬೇಕಿದೆ. ನಿರ್ಲಕ್ಷ್ಯವಹಿಸಿದರೆ ಮಾನವನ ಜೀವನ ನಶಿಸಲಿದೆ ಎಂದರು.
ನಂತರ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಅವರ ಆದೇಶದಂತೆ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಹಾಗೂ ನಂತರ 2:30 ರಿಂದ 4 ಗಂಟೆಯವರೆಗೆ ಕಾರ್ಯಕ್ರಮ ಜರುಗಿತು. ಕ್ಯಾಂಪಸ್ ಆವರಣದಲಿನ್ಲ ಕಾರ್ಯಸೌಧ, ಪರೀಕ್ಷಾ ವಿಭಾಗ ಸೇರಿದಂತೆ ಎಲ್ಲಾ 38 ವಿಭಾಗಗಳ ಸುತ್ತಮುತ್ತಲಿನ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಪರಿಸರವಾಗಿಸಲು ಮಳೆ ನೀರು ಸಂಗ್ರಹಣೆ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ ಭಾರತ ಪಾಕ್ಷಿಕ ಹಾಗೂ ಹಸಿರು ವನದ ಮಹತ್ವ ಮತ್ತು ಮೌಲ್ಯಗಳ ಸಂದೇಶವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಯಿತು.
ಅಭಿಯಾನದ ಅಂಗವಾಗಿ ಕುಲಪತಿ ಪ್ರೊ. ದಯಾನಂದ ಅಗಸರ ಕಾರ್ಯಕ್ರಮದ ನೇತೃತ್ವವಹಿಸಿ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ವಿಭಾಗಗಳ ಸುತ್ತಲಿನ ಪ್ರದೇಶದಲ್ಲಿ ಸಸಿ ನೆಡುವ ಮೂಲಕ ಹಸಿರುವನ ನಿರ್ಮಿಸುವ ಉದ್ದೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳಿಗೆ ನೀರುಣಿಸಿದರು.
ಈ ಸಂದರ್ಭದಲ್ಲಿ ಕುಲಸಚಿವ ಡಾ. ಬಿ. ಶರಣಪ್ಪ, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಕೆ. ಲಿಂಗಪ್ಪ, ಪ್ರೊ. ಪರಿಮಳಾ ಅಂಬೇಕರ್, ಉರ್ದು ವಿಭಾಗದ ಮುಖ್ಯಸ್ಥ ಅಬ್ದುಲ್ ರಬ್ ಉಸ್ತಾದ , ಎನ್‍ಎಸ್‍ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ಕಣ್ಣೂರು, ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ, ಡಾ. ಹನುಮಂತ ಜಂಗೆ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ. ನಿಂಗಣ್ಣ, ಸೇರಿದಂತೆ ಸ್ಥಳೀಯ ಅಭಿಯಂತರ ವಿಭಾಗದ ಜಯಪ್ರಕಾಶ ಕರ್ಜಗಿ, ಅಶೋಕ ಜಿಗಲ್‍ಮಡಿ ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.