ಪರಿಸರ ನಾಶ ತಡೆಯಬೇಕಿದೆ: ಮರೆಣ್ಣನವರ


ಬ್ಯಾಡಗಿ,ಜೂ 8: ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶವಾಗುತ್ತಿದ್ದು, ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಪ್ರಾಣಿ-ಪಕ್ಷಿಗಳು ಸೇರಿದಂತೆ ಮಾನವ ಸಂಕುಲದ ರಕ್ಷಣೆಗಾಗಿ ಪರಿಸರ ನಾಶವನ್ನು ತಡೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಹೇಳಿದರು.
ಪಟ್ಟಣದ ಅರಣ್ಯ ಇಲಾಖೆಯ ಕಾರ್ಯಾಲಯದ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಾಂಕೇತಿಕವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗಿಡಮರಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರ ಹೊಂದಬಹುದು. ಸಸಿಗಳನ್ನು ನೆಟ್ಟು ಪೆÇೀಷಣೆ ಮಾಡಿ ಮರವಾಗಿ ಬೆಳೆಸಬೇಕು. ಅರಣ್ಯ ಘಟಕದ ವತಿಯಿಂದ ನೆಡುವ ಸಸಿಗಳನ್ನು ಸಹ ಕಾಳಜಿಯಿಂದ ನೋಡಿಕೊಳ್ಳಬೇಕು. ನಿಸರ್ಗ ಸಂಪತ್ತು ಹೆಚ್ಚಿದರೆ ಜೀವ ಸಂಕುಲಕ್ಕೆ ಆಹ್ಲಾದಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ವಸಂತಕುಮಾರ ಪಾಟೀಲ, ಹನುಮಂತಪ್ಪ, ಗಣೇಶ, ನಾಗರಾಜ, ಜಗದೀಶ, ಮಹ್ಮದಲಿ, ಮಲಕಪ್ಪ ಪೂಜಾರ, ಕಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.