ಪರಿಸರ ನಾಶದ ವಿರುದ್ದ ಸಾಮಾಜಿಕ ಜಾಗೃತಿ ಅಗತ್ಯ

ಹೊಸನಗರ.ಜೂ.೬; ಪ್ರಸಕ್ತ ಕೊರೋನ ರೋಗದ ತೀವ್ರತೆ ಹೆಚ್ಚಾಗಿದ್ದು, ಪ್ರತಿಯೊಬ್ಬರಿಗೂ ಆಮ್ಲಜನಕದ ಮಹತ್ವ ತಿಳಿಸಿದೆ. ಆಮ್ಲಜನಕವನ್ನು ಪರಿಸರಕ್ಕೆ ನೀಡುವ ಗಿಡಮರಗಳನ್ನು ನೆಟ್ಟಿ, ಬೆಳೆಸಿ ಪೋಷಿಸುವ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪರಿಸರ ತಜ್ಞ ಹನಿಯರವಿ ತಿಳಿಸಿದರು.ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಲೂಕಿನ ಸೊನಲೆ ಅರಣ್ಯ ಶಾಖೆ ವ್ಯಾಪ್ತಿಯ ಹನಿಯ ಗಸ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. ಪರಿಸರ ನಾಶ ಮಾಡುವ ವಿಕೃತ ಮನಸುಗಳಿಗೆ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿದ್ದು, ಇಂಥವರ ವಿರುದ್ದ ಸಾಮಾಜಿಕ ಜಾಗೃತಿಯ ಅಗತ್ಯವಿದೆ. ಅಲ್ಲದೆ, ಕೊರೋನ ಹಿನ್ನಲೆಯಲ್ಲಿ ಜನತೆ ಕೃತಕ ಪ್ರಾಣವಾಯುವಿಗಾಗಿ ಲಕ್ಷಾಂತರ ಹಣ ವ್ಯಯಿಸುತ್ತಿದ್ದಾರೆ. ಪ್ರಕೃತಿಯಲ್ಲಿ ಉಚಿತವಾಗಿ ದೊರೆಯುವ ಆಮ್ಲಜನಕ ನೀಡುವ ಗಿಡಗಳನ್ನು ನೆಟ್ಟಿ ಬೆಳೆಸುವ ಹವ್ಯಾಸ ಪ್ರತಿಯೊಬ್ಬರೂ ರೂಡಿಸಕೊಳ್ಳಬೇಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರ ವಲಯ ಅರಣ್ಯಾಧಿಕಾರಿ ಆದರ್ಶ್, ಪ್ರಮುಖರಾದ ರಾಷ್ಟೊçÃತ್ಥಾನ ಬಳಗದ ಗುರುಮೂರ್ತಿ ಹನಿಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಯ ಉಪಸ್ಥಿತರಿದ್ದರು.