ಪರಿಸರ ನಾಶದ ದುಷ್ಪರಿಣಾಮ ಎಲ್ಲರೂ ಅನುಭವಿಸುವಂತಾಗಿದೆ: ಡಾ. ಶ್ರವಣಕುಮಾರ

ಅಫಜಲಪುರ:ಜು.7: ಮನುಷ್ಯನ ದುರಾಸೆಗೆ ನಾವೆಲ್ಲ ಕಾಡು ಕಡಿದು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿಕೊಂಡಿದ್ದೇವೆ. ಈಗ ಅದರ ದುಷ್ಪರಿಣಾಮವನ್ನು ಎಲ್ಲರೂ ಅನುಭವಿಸುವಂತಾಗಿದೆ ಎಂದು ಬಿಎಲ್‍ಡಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಾದ ಡಾ. ಶ್ರವಣಕುಮಾರ ಮುದ್ರೆಕರ್ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಆನೂರ ಗ್ರಾಮದಲ್ಲಿ ಅಫಜಲಪುರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವತಿಯಿಂದ ನಡೆದ ರಾಷ್ಟೀಯ ಸೇವಾ ಯೋಜನೆಯ ಮೂರನೇ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೈಗಾರೀಕರಣ, ಖಾಸಗೀಕರಣ, ಜಾಗತೀಕರಣದ ಪ್ರಭಾವದಿಂದ ಕಾಡು ನಾಶವಾಗಿದೆ. ಎಷ್ಟು ಸಾಧ್ಯವೋ ಅಷ್ಟು ಪರಿಸರದ ಮೇಲೆ ದೌರ್ಜನ್ಯ ಎಸಗಿದ್ದೇವೆ. ಇದನ್ನು ತಡೆಗಟ್ಟಿ ಪುನಃ ಪರಿಸರ ಸಂರಕ್ಷಣೆ ಮಾಡಬೇಕಾದ ಕರ್ತವ್ಯ ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ. ಪರಿಸರ ಸಮತೋಲನವಾಗಿರಲು ನೀವುಗಳು ಇಂದಿನಿಂದಲೇ ಗಿಡಮರಗಳನ್ನು ನೆಟ್ಟು ಪೆÇೀಷಣೆ ಮಾಡಿ ಎಂದು ಸಲಹೆ ನೀಡಿದರು.

ಗ್ರಾ.ಪಂ ಸದಸ್ಯ ಈರಣ್ಣಗೌಡ ನಾವದಗಿ ಎನ್‍ಎಸ್‍ಎಸ್ ಧ್ವಜಾರೋಹಣ ನೇರವೇರಿಸಿದರು.

ಈ ಸಂದರ್ಭದಲ್ಲಿ ಎನ್‍ಎಸ್‍ಎಸ್ ಸಂಯೋಜಕರಾದ ಡಾ. ದತ್ತಾತ್ರೇಯ ಸಿ.ಹೆಚ್, ಡಾ. ಸಂಗಣ್ಣ ಎಂ ಸಿಂಗೆ, ಡಾ. ಶಾಂತಪ್ಪ ಮೇಲ್ಕೇರಿ, ಗೌರಿಶಂಕರ ಭೂರೆ, ಸಂತೋಷ ಬಡಿಗೇರ, ಟಿ. ರಾಮಕೃಷ್ಣ ಹಾಗೂ ಶಿಬಿರಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.