ಪರಿಸರ ದಿನ: ಸಸಿ ನೆಟ್ಟ ಸಿಬ್ಬಂದಿಗಳು

ಬೀದರ್:ಜೂ.9: ನಗರದ ಗುಂಪಾ ರಸ್ತೆಯಲ್ಲಿರುವ ಸ್ವಧಾರ ಗೃಹ ಕೇಂದ್ರದಲ್ಲಿ ಇತ್ತಿಚೀಗೆ ಪರಿಸರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಯಿತ್ತು.
ಈ ಕಾರ್ಯಕ್ರಮಕ್ಕೆ ಸಸಿ ನೆಡುವುದರೊಂದಿಗೆ ಕಾರ್ಯಕ್ರಮ ನೇರವೆರಿಸಲಾಯಿತ್ತು.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷ ಸ್ಥಾನ ವಹಿಸಿದ ಗೀತಾ ಶ್ರೀಹರಿಯವರು ತಮ್ಮ ಅಧ್ಯಕ್ಷೆಯ ಭಾಷಣದಲ್ಲಿ ಮತನಾಡುತ್ತ, ಗ್ಲೋಬಲ್ ವಾಮಿರ್ಂಗ ಬಗ್ಗೆ ಕಾಳಜಿ ಹಾಗೂ ಮನುಕುಲದ ಜೀವ ರಾಶಿಯ ಅಳಿವು ಹಾಗೂ ಉಳಿವಿನ ಬಗ್ಗೆ ತುಂಬ ಮಾರ್ಮಿಕವಾಗಿ ಮಾತನಾಡಿದರು..
ಇದೆ ಸಂಧರ್ಭದಲ್ಲಿ ಮನೆಗೊಂದು ಸಸಿ ನೆಡುವಂತೆ ಸಲಹೆ ನೀಡಿದರು. ಕಾರ್ಯಕ್ರದಲ್ಲಿ ಸ್ವದಾದ ಕೇಂದ್ರದ ಸಿಬ್ಬಂದಿಗಳು ಹಾಗೂ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸ್ವಾಗತ ಹಾಗೂ ವಂದನಾರ್ಪನೆಯು ಕು. ನೀಕಿತಾ ಅವರಿಂದ ಏರ್ಪಟ್ಟಿತ್ತು.