ಪರಿಸರ ದಿನ: ಸಸಿ ನೆಟ್ಟ ಮಹಾಪೌರ

ಕಲಬುರಗಿ, ಜೂ 5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನದಲ್ಲಿ ಮಹಾನಗರ ಪಾಲಿಕೆ ಮಹಾಪೌರ ವಿಶಾಲ ದರ್ಗಿ ಅವರು ಸಸಿ ನೆಟ್ಟು ಸಸಿಗೆ ನೀರೆರೆಯುವ ಮೂಲಕ ವಿಶ್ವಪರಿಸರ ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಆಯುಕ್ತ ಪ್ರಕಾಶ ರಜಪೂತ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮುನಫ್ ಪಾಟೀಲ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭೀಮಾಶಂಕರ, ಪರಿಸರ ಇಂಜಿನಿಯರ್ ಸುಭಾಷ ಬಾಬು ಮೇಲಿನಕೇರಿ ಅವರು ಸೇರಿದಂತೆ ಮಹಾನಗರ ಪಾಲಿಕೆಯ ಹಲವಾರು ಸಿಬ್ಬಂದಿಗಳು ಉಪಸ್ಥಿತರಿದ್ದರು.