ಪರಿಸರ ದಿನಾಚರಣೆ

ಬಾದಾಮಿ, ಜೂ 6:ಪ್ರಕೃತಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆ ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಮಾಜಿ ಜಿ.ಪಂ.ಸದಸ್ಯ ಪಿ.ಆರ್ ಗೌಡರ ಹೇಳಿದರು.
ಅವರು ಬಾದಾಮಿ ಶುಗರ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡಿ ನಾವುಪ್ರಕೃತಿಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪರಿಸರ ರಕ್ಷಣೆಯಲ್ಲಿ ಸರಕಾರಗಳನ್ನು ಹಾಗೂ ಸಾರ್ವಜನಿಕ ರನ್ನುತೋಡಗಿಸಿ ಕೋಳ್ಳುವ ಸಲುವಾಗಿ ಜೂನ್ 5 ರಂದು ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ ಪರಿಸರ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಪ್ರಕೃತಿಯನ್ನು ಯಾರು ಲಘವಾಗಿ ಪರಿಗಣಿಸ ಬಾರದು ಎಂದು ಜನರಿಗೆ ನೆನಪಿಸುವದು ಇದರ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಧು ಯಡ್ರಾವಿ ಮಾತನಾಡಿ ಸದ್ಯದ ವರ್ತಮಾನದಲ್ಲಿ ಮನುಷ್ಯನ ಅಭಿವೃದ್ಧಿಯ ಗೀಳಿನಿಂದ ಪರಿಸರಕ್ಕೆ ವಿಪರೀತ ಹಾನಿಯುಂಟಾಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಗಿಡ ಮರಗಳನ್ನು ನಾಶ ಮಾಡಲಾಗುತ್ತಿದೆ ಇದರಿಂದ ಪರಿಸರಕ್ಕೆ ಹಾನಿ ಅಗುವದಲ್ಲದೆ ಮುಂದಿನ ಪೀಳಿಗೆಗೆ ತೊಂದರೆ ಆಗುತ್ತದೆ. ಆದ ಕಾರಣ ಪತ್ರಿಯೊಬ್ಬರು ಸಾಧ್ಯವಾದಷ್ಟು ಗಿಡ ಮರಗಳನ್ನು ನೆಡಬೇಕು ಎಂದು ಕರೆನೀಡಿದರು. ಈ ಸಂದರ್ಭದಲ್ಲಿ ರತನ್ ಯಡ್ರಾವಿ ಹಾಗೂ ಕಾರ್ಖಾನೆಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.