ಪರಿಸರ ದಿನಾಚರಣೆ ಸಸಿ ನೆಟ್ಟ ಶಾಸಕ ನಾಗೇಂದ್ರ

ಬಳ್ಳಾರಿ ಜೂ 05 : ಅರಣ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರ ಹಸರೀಕರಣ ಕಾರ್ಯಕ್ರಮದಡಿ ತಿಲಕ್ ನಗರದ ಉದ್ಯಾನವನದಲ್ಲಿ ಗ್ರಾಮಿಣ ಶಾಸಕ ಬಿ.ನಾಗೇಂದ್ರ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ ಬಿಸಿಲಿನ ನಗರ ಬಳ್ಳಾರಿಯಲ್ಲಿ‌ ಕಳೆದ ಹಲವು ವರ್ಷಗಳಿಂದ ಗಿಡಗಳನ್ನು ನೆಡುತ್ತಲೇ ಇದೆ. ಅವು ಬೆಳೆದು ದೊಡ್ಡವಾಗಿವೆ. ಆದರೆ ನೆಟ್ಟ ಗಿಡಗಳೆಲ್ಲ ಬೆಳೆಯುತ್ತಿಲ್ಲ. ಅದಕ್ಕಾಗಿ ನಿಟ್ಟ ಪ್ರಯಿ ಗಿಡ ಮರವಾಗುವಂತೆ ಕಾಪಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ನಗರ ಶಾಸಕ ಸೋಮಶೇಖರ ರೆಡ್ಡಿ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.