ಪರಿಸರ ದಿನಾಚರಣೆ: ವನಮಹೋತ್ಸವ ಆಚರಣೆ

ಹುಬ್ಬಳ್ಳಿ,ಜೂ8: ಬಸವ ಪರಿಸರ ಸಂರಕ್ಷಣಾ ಸಮಿತಿಯು ವಿಶ್ವ ಪರಿಸರ ದಿನ ನಿಮಿತ್ತ ಶ್ರೀ ಸದ್ಗುರು ಶಿವಲಿಂಗೇಶ್ವರ ಸ್ವಾಮಿಗಳವರ ಶ್ರೀ ರಾಜ ವಿದ್ಯಾಶ್ರಮದಲ್ಲಿ ಸಸಿ ನೆಟ್ಟು ನೀರುಣಿಸುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು.
ಲಾಕ್‍ಡೌನ್ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಬಡವರು ಸೇರಿದಂತೆ ನೂರಾರು ಜನರಿಗೆ ಪ್ರಸಾದ ವಿತರಣೆ ಮಾಡಿದ ಶ್ರೀ ರಾಜ ವಿದ್ಯಾಶ್ರಮದ ಭಾರತ ಭೂಷಣ ಶ್ರೀ ಷಡಕ್ಷರಿದೇವರು ಅವರಿಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ,ದರ್ಶನಾಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ವಾಕರಸಾ ನಿಗಮದ ಮಾಜಿ ಅಧ್ಯಕ್ಷ ಸದಾನಂದ ವಿ. ಡಂಗನವರ, ಪಂಚಮಸಾಲಿ ಸಮಾಜದ ಧುರೀಣ ಗಂಗಾಧರ ದೊಡ್ಡವಾಡ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಶಿವರುದ್ರ ಟ್ರಸ್ಟ ನಿರ್ಧೇಶಕ ಡಾ. ಬಸವಕುಮಾರ ತಲವಾಯಿ, ಶಿವಬಸಪ್ಪ ಗಚ್ಚಿನವರ, ಅನಿಲ್ ದೇಶಪಾಂಡೆ, ಮೌನೇಶ ಬಡಿಗೇರ, ವಿರುಪಾಕ್ಷ ಜಂಗಿನವರ, ಗೂಳಪ್ಪ, ಅಶೋಕ ಬಟ್ಟರ, ಮುಂತಾದವರು ಇದ್ದರು.