ಪರಿಸರ ದಿನಾಚರಣೆ: ಪ್ರತಿಜ್ಞಾವಿಧಿ ಬೋಧನೆ

ಬೀದರ: ಜೂ.7:ನಗರದ ಸ್ವಾಮಿ ವಿವೇಕಾನಂದ ಕಾಲೋನಿಯಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದ ಸಹಯೋಗದಲ್ಲಿ ಸಸಿ ನೆಡುವಿಕೆ, ಸಸಿ ವಿತರಣೆ ಜೊತೆಗೆ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭ ಜರುಗಿತು.
ನಗರ ಸಭೆ ಸದಸ್ಯ ರಾಜಾರಾಮ ಚಿಟ್ಟಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮರಗಳು ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಗುತ್ತದೆ .ಮರಗಳು ನಮಗೆ ಆಮ್ಲಜನಕ ಉಚಿತವಾಗಿ ನೀಡುತ್ತವೆ. ಕೊವಿಡ್ ನಲ್ಲಿ ಆಕ್ಸಿಜನ್ ಕೊರತೆಯಾಗಿ ಮಾನವರು ಸಾಯುತ್ತಿದ್ದಾರೆ. ನಾವು ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಸಾಧ್ಯವೆಂದು ಹೇಳಿದರು.
ಇನ್ನೋರ್ವ ನಗರ ಸಭೆ ಸದಸ್ಯ ಶಶಿಧರ ಹೊಸಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ನಗರದ ವಿವಿಧ ಬಡಾವಣೆ ಗಳಲ್ಲಿ ಸಸಿ ನೆಡುವ ಕಾಂiÀರ್iಕ್ರಮ ಹಮ್ಮಿಕೊಳ್ಳಲಾಗಿದೆ. ನಗರ ಸಭೆಯಿಂದ ಉದ್ಯಾನ ಅಭಿವೃದ್ದಿಗೆ ಒತ್ತು ಕೊಡಲಾಗಿದೆ. ವಿವೇಕಾನಂದ ಬಡಾವಣೆಯ ಉದ್ಯಾನ ರೂಪು-ರೇಷ ಹಾಗೂ ಯೋಜನೆ ಸಿದ್ದವಾಗಿದೆ. ಶೀಘ್ರದಲ್ಲಿ ಉದ್ಯಾನದ ಕಾಂiÀರ್i ಪ್ರಾರಂಭ ಮಾಡಲಾಗುವುದು ಎಂದರು.
ಶ್ರೀ ಶಿವಕುಮಾರ ರಾಠೋಡ ವಲಯ ಅರಣ್ಯಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ನಗರದ ಎಲ್ಲಾ ಬಡಾವಣೆಗಳಲ್ಲಿ ಸಸಿ ನೆಡುವ ಯೋಜನೆಯನ್ನು ಬೀದರ ಸಾಮಾಜಿಕ ಅರಣ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಸಸಿ ನೆಡುವ ಕಾಂiÀರ್iಕ್ರಮ ಒಂದು ಮಾದರಿಯಾಗಿದೆ ಎಂದರು.
ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪ್ರೊ.ಸಂಗಯ್ಯ ಕಲ್ಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ವಿಶ್ವದಲ್ಲಿ 47 ನೇ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಜೀವ ಪರಿಸರ ವ್ಯವಸ್ಥೆ ಮರು ಸ್ಥಾಪನೆ ಈ ವರ್ಷದ ವಿಷಯವಾಗಿದೆ ಎಂದು ನುಡಿದರು.
ಈ ವೇಳೆ ನಗರ ಸ್ವಚ್ಛತೆ ಹಾಗೂ ಕೊವಿಡ ವಾರಿಯರ್ಸ ರಾದ ಪೌರ ಕಾರ್ಮಿಕ ಶಿವರಾಜ ಹಾಗೂ ಜಗದೇವಿ ಸನ್ಮಾನಿಸಲಾಯಿತು.
ಪಂಚಾಕ್ಷರ ನಿಲಯ ಕೊವಿಡ್ ವಿಕ್ಟರಿ ಗಾರ್ಡನ್‍ನಲ್ಲಿ ಬೆಳೆಸಿದ ಇನ್ಸುಲಿನ್ ಗಿಡ. ಎರೊಹೆಡ್ ಗಿಡ, ರಸ್ಕಸ ಗಿಡ, ದಾಸವಾಳ, ಬಸಳೆ ಬಳ್ಳಿ ಸಸಿಗಳನ್ನು ಕಾಂiÀರ್iಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಬಡಾವಣೆ ನಿವಾಸಿಗಳಿಗೆ ವಿತರಿಸಲಾಯಿತು.
ವೀರಭದ್ರಪ್ಪ ಉಪ್ಪಿನ ಅವರು ಪರಿಸರ ಕಾಪಾಡುವ ಪ್ರತಿಜ್ಞಾವಿಧಿ ನೆರವೇರಿಸಿದರು. ಸಂಘದ ಕಾರ್ಯದರ್ಶಿ ದಾನಿ ಬಾಬುರಾವ ಸ್ವಾಗತ ಕೋರಿದರು. ದೇವಿಪ್ರಸಾದ ಪಾಲಿಕರ ಕಾರ್ಯಕ್ರಮ ನಿರೂಪಿಸಿದರು. ಪಂಚಾಕ್ಷರಿ ಕಲ್ಮಠ ವಂದಿಸಿದರು. ಶಾಂಭವಿ ಪರಿಸರ ಗೀತೆ ಹಾಡಿದರು. ರಾಜೇಶ್ವರಿ ಸಸಿಗಳಿಗೆ ಪೂಜೆ ನೆರವೇರಿಸಿದರು.
ಸುರೇಶ ಚಿಟಗುಪಕರ್, ಸಂಜು ಸಜ್ಜನ, ಶಿವಪುತ್ರಪ್ಪ ಪಾಟೀಲ, ಪ್ರಶಾಂತ, ವಿಜಯಕುಮಾರ, ವಿಶ್ವನಾಥ ಮಲಗೊಂಡ, ದಿಲೀಪ ಹುಲಸೂರೆ ಮುಂತಾದವರು ಭಾಗವಹಿಸಿದರು.