ಪರಿಸರ ದಿನಾಚರಣೆ ಕೊಡುಗೆ ಕೈಬೀಸಿ ಕರೆಯುತ್ತಿರುವ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್

ಹುಮನಾಬಾದ್:ಜೂ.5:ಪಟ್ಟಣ ಶ್ರೀ ವೀರಭದ್ರೇಶ್ವರ ಪವಿತ್ರ ಶ್ರೀ ಕ್ಷೇತ್ರದಿಂದ ಅಂತರ ರಾಜ್ಯಗಳಲ್ಲಿ ಖ್ಯಾತಿ ಪಡೆದಿದೆ. ವಿವಿಧ ಅಭಿವೃದ್ಧಿ ಕೆಲಸಗಳಿಂದ ತಾಲೂಕ ಕೇಂದ್ರ ಸ್ಥಳವಾಗಿರುವ ಹುಮನಾಬಾದ್ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಾÀಲೂಕುಗಳಲ್ಲಿಯೆ ಹೆಸರು ಮಾಡಿದೆ.ಪ್ರವಾಸೋದ್ಯಮ್ಮವಗಿ ಬೆಳೆಯಲು ಮಾಜಿ ಸಚಿವ, ಶಾಸಕ ರಾಜಶೇಖರ್ ಪಾಟೀಲರು ಕೆ,ಕೆ,ಆರ್, ಡಿ,ಬಿ 2019-20 ಸಾಲಿನ ಅನುದಾನದಲ್ಲಿ ಒಂದು ಕೋಟಿ ರೂಪಾಯಿ ಟಿ ಪಾರ್ಕ ಮಂಜುರುಮಾಡಿದ್ದಾರೆ.ಪಟ್ಟಣದ ಫಕಿರ ಟೇಕಡಾ ಹತ್ತಿರ 16 ಎಕ್ಕರೆ ಜಮಿನಿನಲ್ಲಿ ಪ್ರಾದೇಶಿಕ ವಲಯ ಅರಣ್ಯ ವತಿಯಿಂದ ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನ ಟ್ರೀ ಪಾರ್ಕ ನಿರ್ಮಾಣ ಮಾಡಲಾಗಿದೆ. ಹತ್ತು ಫಿಟ್ ಎತ್ತರದ ಅರಳಿ ಆಲ ಬೇವು ಹತ್ತಿ ಗಿಡ ಶ್ರೀಗಂಧ ಬಸರಿ ಕಾಜು, ಬಸವನಪಾದ, ಹೋಂಗೆ ಸೇರಿದಂತೆ ವಿವಿಧ ಜಾತಿಯ 880 ಗಿಡಗಳನ್ನು ನೆಡಲಾಗಿದೆ.ಗಿಡಗಳ ಸಂರಕ್ಷಣೆಗಾಗಿ ಹನಿ ನೀರಾವರಿ ಅಳವಡಿಸಲಾಗಿದೆ ಈ ಟ್ರೀ ಪಾರ್ಕದಲ್ಲಿ ವಾಕಿಂಗ ಪಾತ ಪರಗೋಲ ಮಕ್ಕಳ ಆಟಿಕೆ ಸಾಮಾನುಗಳಾದ ಜಾರಬಂಡಿ ಜೂಕಾಲಿ ಸೇರಿದಂತೆ ವಿವಿದ ಬಗೆ ಬಗೆಯ ಉಪಕರಣಗಳು ಸ್ಥಾಪಿಸಲಾಗಿದೆ. ಕುಡಿಯುವ ನೀರಿನ ಸೌಲಬ್ಯಕ್ಕಾಗಿ ನೀರಿನ ಟ್ಯಾಂಕ್, ಪುರುಷ ಮತ್ತು ಮಹಿಳ ಶೌಚಾಲಯ ನಿರ್ಮಾಣ ಮಾಡಲಾಗಿದೆ.ಟೀ ಪಾರ್ಕ ಸುತ್ತ ಮುತ್ತ ತಂತಿ ಬೇಲಿ ಹಾಕಲಾಗಿದೆ.ಉಪರಣ್ಯ ಸಂರಕ್ಷಣ ಅಧಿಕಾರಿ ಶಿವಶಂಕರ, ಸಾಯಕ ಉ¥ಅÀರಣ್ಯ ಸಂರಕ್ಷಣಧಿಕಾರಿ ಎ,ಬಿ ಪಾಟೀಲ್‍ಇವರಗಳ ಮಾರ್ಗ ದರ್ಶನ ಮೇರೆಗೆ ವಲಯ ಅರಣ್ಯ ಅಧಿಕಾರಿ ಬಸವರಾಜ ಡಾಂಗೆ ಟ್ರೀ ಪಾರ್ಕ ನಿರ್ಮಾಣ ಕಾಮಗಾರಿ ಕೈಗೊಂಡಿದ್ದಾರೆ. ಶ್ರೀಘ್ರದಲ್ಲಿಯೆ ಟ್ರೀ ಪಾರ್ಕವಿಕ್ಷೇಣೆಗೆ ಸಾರ್ವಜನಿಕರಿಗೆ ಚಾಲನೆ ನೀಡಲಾಗುವುದೆಂದು ಬಸವರಾಜ ಡಾಂಗೆ ತಿಳಿಸಿದ್ದಾರೆ.