ಪರಿಸರ ದಿನಾಚರಣೆಗೆ ಮಾತ್ರ ಸಿಮಿತ ಮಾಡದೆ ನಿತ್ಯ ಆಚರಣೆ ಮಾಡೊಣ

ಸಿರವಾರ.ಜೂ.೧೦- ಪರಿಸರ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಮಾನವರದ್ದಾಗಿದೆ. ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಯಿಸಿಲ್ಲ. ಜೂನ್ ೫ರಂದು ಹಲವೆಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದರೆ ಇದು ಇನ್ನೂ ಆಚರಣೆಗೆ ಮಾತ್ರ ಸೀಮಿತವಾಗಿದೆ. ಮಾತ್ರವಲ್ಲದೇ ಪರಿಸರವು ಕೇವಲ ಪರಿಸರ ದಿನಾಚರಣೆಗೆ ಮಾತ್ರವೇ ಸೀಮಿತವಾದಂತಿದೆ. ಜತೆಗೆ ಕೆಲವು ಭಾಷಣಗಳಿಗೆ ಮಾತ್ರ ಸಾಕ್ಷಿಯಾಗಿದೆ. ಈ ದಿನಕ್ಕಿರುವ ಮಹತ್ವವನ್ನು ಪ್ರತಿಯೊಬ್ಬ ವ್ಯಕ್ತಿಯೂ ತಿಳಿಯಬೇಕಾಗಿದೆ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರ.
ಪಟ್ಟಣದ ವಾರ್ಡ ನಂ ೧ ನೀಲಮ್ಮ ಕಾಲೋನಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನೀರು ಹಾಕುಮ ಮೂಲಕ ಚಾಲನೆ ನೀಡಿದ ಮಾತನಾಡಿದ ಅವರು ಪರಿಸರ, ಪಕೃತಿ ನಮಗೆ ಎಲ್ಲಾ ನೀಡಿದೆ. ಆದರೆ ಮಾನವ ಆಸೆಗೆ ಮಿತಿ ಇಲ್ಲದೆ ನಾಶ ಮಾಡುತ್ತಿದೆವೆ. ಪ್ರಕೃತಿಯಿಂದ ಎಲ್ಲಾ ಪಡೆದ ನಾವು ಅದಕ್ಕೆ ಏನು ಕೊಡುಗೆ ಕೊಡುವುದು ಬೇಡ ಅದನ್ನು ಉಳಿಸಿ ಮುಂದಿನ ಪಿಳಿಗೆಗೆ ನೀಡಿದರೆ ಸಾಕು ಎಂದರು. ಪ.ಪಂ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ಮಾತನಾಡಿ ಭೂಮಿ, ಗಿಡ, ಮರ, ಹಣ್ಣು, ಸ್ವಚ್ಛ ಪರಿಸರವನ್ನು ಮುಂದಿನ ಪಿಳಿಗೆಗೆ ಉಳಿಸುವುದಕ್ಕಾಗಿ ಜಾಗೃತಿ ಮೂಡಿಸಲು ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಜೂ ೫ ಕ್ಕೆ ಮಾತ್ರ ಸೀಮಿತವಾಗದೆ ನಿತ್ಯ ಇ ಕಾರ್ಯ ಸಾಗಬೇಕು.
ನಾವು ಸಸಿಗಳನ್ನು ಹಾಕದಿದರೆ ಅಡಿಯಿಲ, ಇರುವ ಮರಗಳನ್ನು ಹಾಳು ಮಾಡದೆ ಮುಂದಿನ ಪಿಳಿಗೆಗೆ ಉಳಿಸಿ ಕೊಡುಗೆಯಾಗಿ ನಿಡೋಣ ಎಂದರು.ಈ ಸಂದರ್ಭದಲ್ಲಿ ಮಾನ್ವಿ ತಾಲೂಕು ಜೆಡಿಎಸ್ ಅಧ್ಯಕ್ಷ ಟಿ. ಮಲ್ಲಿಕಾರ್ಜುನ್ ಪಾಟೀಲ್, ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ರಾಜ ರಾಮಚಂದ್ರ ನಾಯಕ, ಸಿರವಾರ್ ಜೆಡಿಎಸ್ ಹಿರಿಯ ಮುಖಂಡರಾದ ಜಿ.ಲೋಕರೆಡ್ಡಿ, ಮಾನ್ವಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ.ಇಸ್ಮಾಯಿಲ್,ಖಲೀಲ್ ಖುರೇಷಿ, ಮಾಜಿ ಜೆಡಿಎಸ್ ಯುವ ನಾಯಕ ಹರವಿ, ಮೌನೇಶ್, ಚಂದ್ರುಶೇಖರಯ್ಯಸ್ವಾಮಿ ಹಿರೇಮಠ್, ಮಾಜಿ ಎಪಿಎಂಸಿ ನಿರ್ದೇಶಕ ಈಶಪ್ಪ ಹೂಗಾರ, ಕಾಶೀನಾಥ್ ಸರೋದೆ, ಎಂ. ಪ್ರಕಾಶಪ್ಪ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ನಾಗರಾಜಗೌಡ, ದಾನಪ್ಪ, ಗ್ಯಾನಪ್ಪ, ಚಂದ್ರಶೇಖರ್, ಶಾಂತಪ್ಪ ಪಿತಗಲ್, ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಕೆ. ಮುನಿಸ್ವಾಮಿ, ಅರಣ್ಯಾಧಿಕಾರಿ ರಾಜೇಶ್ ನಾಯಕ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಮತ್ತು ಪ.ಪಂ ಸಿಬ್ಬಂದಿಗಳು ಇದ್ದರು.