ಪರಿಸರ ಜಾಗೃತಿ ಮತ್ತು ಆರೋಗ್ಯ ಅರಿವು ಕಾರ್ಯಕ್ರಮ

ಬೀದರ:ಆ.28:ಜಿಲ್ಲಾ ಆಯುಷ್ ವೈದ್ಯ ಸಂಘ ಮತ್ತು ಎನ್.ಜಿ.ಓ. ಬೀದರ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಅಲಿಯಾಬಾದ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪರಿಸರ ಜಾಗೃತಿ ಮತ್ತು ಆರೋಗ್ಯದ ಕುರಿತು ಅರಿವು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ಸುಮಾರು 60 ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳು ಹಂಚಲಾಗಿತ್ತು.
ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಮೃತ್ ರಾವ್ ಚಿಮಕೋಡೆ ಬೀದರ್ ಹಾಗೂ ಅಲಿಯಾಬಾದ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಫಿಕ್ ಅವರು ಮತ್ತು ಬೀದರ್ ಜಿಲ್ಲಾ ಆಯುಷ್ ವೈದ್ಯರ ಸಂಘದ ಅಧ್ಯಕ್ಷರಾದ ಡಾ|| ಸಂತೋಷ್ ಕುಮಾರ್ ಅಣ್ಣಪ್ಪನವರ್ ಮತ್ತು ಡಾ|| ವಿಜಯ ಹೈಬತಿ ಹಾಗೂ ಡಾ|| ಕಮಲಾಕರ್ ಸ್ವಾಮಿ ಮತ್ತು ಡಾ|| ಮಹೇಶ್ ಪಾಟೀಲ್ ಹಾಗೂ ಅಂಗನವಾಡಿಯ ಶಿಕ್ಷಕಿಯಾದ ಕವಿತಾ ಮತ್ತು ಅವರ ಸಂಗಡಿಯರು ಹಾಗೂ ನಿವೃತ್ತ ಡಿ.ಸಿ.ಸಿ. ಬ್ಯಾಂಕಿನ ಮ್ಯಾನೇಜರ್ ಚಂದ್ರಕಾಂತ ಅಣ್ಣಪ್ಪನವರ್ ಮತ್ತು ಸಂಗಮೇಶ್ ಚೇತನ್ ಬಾಬುಗೌಡ ಉಪಸ್ಥಿತರಿದ್ದರು.