ಪರಿಸರ ಜಾಗೃತಿ ಅಭಿಯಾನ-ಮದುಮಕ್ಕಳಿಗೆ ಸಸಿ ವಿತರಣೆ

ಬೀದರ:ಜೂ.14:ದಿನೆ ದಿನೆ ಹೆಚ್ಚುತ್ತಿರುವ ತಾಪಮಾನವನ್ನು ತಗ್ಗಿಸಲು ಬೃಹತ್ ಪ್ರಮಾಣದಲ್ಲಿ ಗಿಡ ನೆಡುವುದು ಹಾಗೂ ಇದ್ದ ಗಿಡಗಳನ್ನು ಜೋಪಾನ ಮಾಡುವ ಅಭಿಯಾನದಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಇದೇ ನಿಟ್ಟಿನಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸುವ ಬಸ್ಸಿನ ಟಿಕೇಟ್ ಮೇಲೆ “ಪರಿಸರ ಜಾಗೃತಿ ಘೋಷಣೆಗಳನ್ನು ಮುದ್ರಿಸಬೇಕು” ಎಂದು ಪರಿಸರ ಪ್ರೇಮಿ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ರವರು ಸರಕಾರಕ್ಕೆ ಮನವಿ ಮಾಡಿದರು. ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಿರುವುದು ಸ್ವಾಗತಾರ್ಹವಾಗಿದೆ. ಟಿಕೆಟ್ ಮೇಲೆ ಮಾಡುವ ಮುದ್ರಣ ದಿಂದ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಹಾಗೂ ಬಾಲಕಿಯರು ಜಾಗೃತರಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಅವರು ಬೀದರ್ ನ ಘಾಳೆ ಲಕ್ಸುರಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಬಿರಾದಾರ ಪರಿವಾರದ ಮದುವೆಯಲ್ಲಿ ಮದು ಮಕ್ಕಳಿಗೆ ಉಚಿತವಾಗಿ ಸಸಿ ವಿತರಿಸಿ ಮಾತನಾಡು ತ್ತಿದ್ದರು. ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಮತದಾನ ಜಾಗೃತಿ ಘೋಷಣೆಗಳನ್ನು ಮುದ್ರಿಸಲಾಗಿತ್ತು. ಅದೇ ತೆರನಾಗಿ ಪರಿಸರ ದ ಬಗ್ಗೆ ಕೂಡ ಕ್ರಮ ಕೈಗೊಳ್ಳ ಬೇಕೆಂದು ಮನವಿ ಮಾಡಿದರು.

ಮದು ಮಕ್ಕಳಾದ ಸಾಗರ-ಶಿವಾನಿ ಯವರು ಸಸಿಗಳನ್ನು ಸ್ವೀಕರಿಸಿದರು. ಚಂದ್ರಕಲಾ-ಡಾ.ಬಸವರಾಜ ಎಸ್. ಬಿರಾದಾರ್, ವಿದ್ಯಾವತಿ-ವಿಶ್ವನಾಥ ನಾಗೂರೆ, ಸುಲೋಚನಾ- ಚಂದ್ರಶೇಖರ, ಶ್ರೀ ದೇವಿ ರಮೇಶ್, ಪೂಜಾ ನಿಜಲಿಂಗಪ್ಪ, ಅಶ್ವಿನಿ ಪರಮೇಶ್ವರ, ಡಾ. ಸುಪ್ರಿಯಾ ಡಾ ರವಿಕಾಂತ್, ಸೂರಜ್, ವಿಜಯ, ಮುಕುಂದ, ಶಿವಶರಣಪ್ಪ ಹುಗ್ಗೆ ಪಾಟೀಲ, ಅಲ್ಲದೇ ಅನೇಕ ಬಂಧು ಬಳಗ ದವರು ಹಾಜರಿದ್ದರು.