ಪರಿಸರ ಜಾಗೃತಿಗೆ ದೇಶಾದ್ಯಂತ ರಾಬಿನಸಿಂಗ್ ಸೈಕಲ್ ಜಾಥಾ

ತಾಳಿಕೋಟೆ : ಡಿ.24: ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಶಿಕ್ಷಣ ಅಭಿವೃದ್ದಿ ಸಬಲಿಕರಣಕ್ಕೆ ಆಸಕ್ತಿ ನೀಡಿದಂತೆ ಪರಿಸರ ರಕ್ಷಣೆಗೂ ಎಲ್ಲರೂ ಆಧ್ಯತೆ ನೀಡಬೇಕೆಂದು ಸೈಕ್ಲಿಸ್ಟ್ ರಾಬಿನಸಿಂಗ್ ವಿಷ್ಣುಸಿಂಗ್ ಹರಿಹಾರ ಅವರು ಹೇಳಿದರು.
ಶನಿವಾರರಂದು ಪರಿಸರ ಜಾಗೃತಿಗಾಗಿ ತಾಳಿಕೋಟೆ ಪಟ್ಟಣಕ್ಕೆ ಸೈಕಲ್ ಮೇಲೆ ಆಗಮಿಸಿದಾಗ ಪಟ್ಟಣದ ರಜಪೂತ ಸಮಾಜಬಾಂದವರು ಮಹಾ ರಣಾಪ್ರತಾಪಸಿಂಹ್ ಸರ್ಕಲ್‍ನಲ್ಲಿ ಸನ್ಮಾನ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಉತ್ತರ ಪ್ರದೇಶ ಇಟಿವಾ ಗ್ರಾಮದ ಕೃಷಿಕ ಕುಟುಂಭದಲ್ಲಿ ಜನಿಸಿದ್ದೇನೆ ನಾನು ಪಧವಿದರನಾಗಿದ್ದು ಈಗಾಗಲೇ ನಾನು ದೇಶಾಧ್ಯಂತ ಸಂಚರಿಸಿ ಅನೇಕ ವಿಷಯಗಳನ್ನು ಅರಿತುಕೊಂಡಿದ್ದೇನೆ ಪರಿಸರ ಎಂಬುದು ರಕ್ಷಣೆ ಮಾಡಲು ಒಬ್ಬರಿಂದ ಸಾಧ್ಯವಿಲ್ಲಾ ಎಲ್ಲರೂ ಕೈಜೋಡಿಸಿದಾಗ ಪರಿಸರ ರಕ್ಷಣೆವಾಗಲಿದೆ ನಮಗೆ ಅವಶ್ಯವಿರುವ ಸ್ವಚ್ಚ ಗಾಳಿ, ಸ್ವಚ್ಚ ಆಹಾರ ಸಿಗಲು ಗಿಡಮರಗಳನ್ನು ಬೆಳೆಸಬೇಕು ಉತ್ತಮವಾದ ವಾತಾವರಣಕ್ಕೆ ಸ್ವಚ್ಚತೆ ಎಂಬುದನ್ನು ಕಾಪಾಡಬೇಕು ದೇಶದ ಯಾವುದೇ ಭಾಗದಲ್ಲಿಯೂ ಪರಿಸರಕ್ಕೆ ಹಾನಿಯಾದರೂ ಕೂಡಾ ಇಡೀ ದೇಶದಲ್ಲಿಯ ಪರಿಸರಕ್ಕೆ ಪೆಟ್ಟುಕೊಡುತ್ತದೆ ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು ನಾವು ಕೇವಲ ಪರಿಸರ ರಕ್ಷಣೆ ಎಂದರೆ ಗಿಡಮರಗಳನ್ನು ಹಚ್ಚುವದು ಅಷ್ಟೇ ಅಲ್ಲಾ ವಾಯು ಮಾಲಿನ್ಯ ಕೆಡದಂತೆ ನೋಡಿಕೊಳ್ಳಬೇಕು ಜಲ ಮಾಲಿನ್ಯ ಕೆಡದಂತೆ ನೋಡಿಕೊಳ್ಳಬೇಕು ದೇಶಿಯ ಆಹಾರ ಪದ್ದತಿ ಸೇವಿಸುವದನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದ ಅವರು ತಮಿಳುನಾಡಿನ ಕನ್ಯಾಕುಮಾರಿಯಿಂದ 10 ಅಕ್ಟೋಬರ್ 2022 ರಂದು ಪರಿಸರ ಜಾಗೃತಿಗಾಗಿ ದೇಶಾಧ್ಯಂತ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ್ದೇನೆ ಈಗಾಗಲೇ ತಮಿಳುನಾಡು, ಕೇರಳಾ, ಕರ್ನಾಟಕ, ಆಂದ್ರಪ್ರದೇಶ, ಓಡಿಸಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಆಸಾಂ, ಮೇಘಾಲಯ, ತ್ರಿಪೂರಾ, ಮಿಜೋರಾಂ, ಬಿಹಾರ, ಉತ್ತರ ಪ್ರದೇಶ, ಉತ್ತರಖಂಡ, ಹರಿಯಾಣ, ಪಂಜಾಬ, ದೇಹಲಿ, ರಾಜಸ್ಥಾನ, ಗುಜರಾತ, ಮಹಾರಾಷ್ಟ್ರ, ಒಳಗೊಂಡು ಜಾಥಾ ಪ್ರಾರಂಬಿಸಿ 443ನೇ ದಿನದಲ್ಲಿ 24 ರಾಜ್ಯಗಳನ್ನು ಸಂಚರಿಸುತ್ತಾ ಒಟ್ಟು 26 ಸಾವಿರ ಕೀಲೋ ಮೀಟರ್ ಸಂಚಾರವನ್ನು ಮಾಡಿದ್ದೇನೆ ಒಂದು ದಿನಕ್ಕೆ 110 ರಿಂದ 120 ಕೀಲೋ ಮೀಟರ್ ಸಂಚಾರ ಮಾಡುತ್ತಿದ್ದು ಸದ್ಯ ತಾಳಿಕೋಟೆಯಿಂದ ಯಾಧಗಿರಿ ಜಿಲ್ಲೆಗೆ ಪ್ರವೇಶಿಸಿ ತೆಲಂಗಾಣ ಮೂಲಕ ಛತ್ತಿಸಘಡ, ಮಧ್ಯಪ್ರದೇಶಕ್ಕೆ ತೆರಳಿ ನನ್ನ ಜನ್ಮದಿನವಾದ ಮಾರ್ಚ 11-2024 ರಂದು ಬೋಪಾಲನಲ್ಲಿ ಜಾಥಾ ಮುಕ್ತಾಯಗೊಳಿಸಲಿದ್ದೇನೆ ನನ್ನ ಈ ಸೈಕಲ್ ಯಾತ್ರೆಗೆ ಪತ್ನಿ, ಮಕ್ಕಳು ಒಳಗೊಂಡು ಕುಟುಂಭ ವರ್ಗದವರು ಸಹಕರಿಸುತ್ತಿದ್ದು ನನ್ನ ಈ ಕಾರ್ಯಕ್ಕೆ ಇನ್ನಷ್ಟು ಪುಷ್ಠಿ ಬಂದಂತಾಗಿದೆ ಎಂದರು.
ರಜಪೂತ ಸಮಾಜದ ಮುಖಂಡ ಗೋವಿಂದಸಿಂಗ್ ಮೂಲಿಮನಿ ಅವರು ಮಾತನಾಡಿ ರಜಪೂತ ಸಮಾಜದ ಯುವಕ ರಾಬಿನಸಿಂಗ್ ಹರಿಹಾರ ಅವರು ಕಳೆದ 443 ದಿನಗಳಿಂದ ದೇಶಾಧ್ಯಂತ ಸೈಕಲ್ ಮೂಲಕ ಪರಿಸರ್ ಜಾಗೃತಿಗೆ ಇಳಿದಿರುವದು ಸಮಾಜಕ್ಕೆ ಹೆಮ್ಮೆ ತಂದುಕೊಟ್ಟಿದ್ದೆ ಈ ನಿಟ್ಟಿನಲ್ಲಿ ಆತನ ಶ್ರಮ ವ್ಯರ್ಥವಾಗದಂತೆ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗುವದರ ಜೊತೆಗೆ ಪರಿಸರ ಜಾಗೃತಿಗಾಗಿ ಪ್ರತಿನಿತ್ಯ ಕೆಲಸ ನಿರ್ವಹಿಸೋಣ ವೆಂದರು.
ಇನ್ನೋರ್ವ ರಜಪೂತ ಸಮಾಜದ ಮುಖಂಡ ಸುರೇಶ ಹಜೇರಿ ಅವರು ಮಾತನಾಡಿ 26000 ಸಾವಿರ ಕೀಲೋ ಮೀಟರ್ ಸೈಕಲ್ ತುಳಿಯುವದು ಸಾಮಾನ್ಯವಲ್ಲಾ ಇಂದಿನ ದಿನಮಾನದಲ್ಲಿ ವಾಹನಗಳಲ್ಲಿಯೇ ಪ್ರಯಾಣಿಸುವದು ಕಷ್ಟಕರ ಸಂದರ್ಬದಲ್ಲಿ ಪರಿಸರ ರಕ್ಷಣೆಗೆ ಜಾಗೃತಿಗಾಗಿ ರಾಬಿನಸಿಂಗ್ ಪಣತೊಟ್ಟು ಹೊರಟಿರುವದು ಹೆಮ್ಮೆಯ ವಿಷಯ ಪಧವಿದರನಾಗಿದ್ದರೂ ಕೂಡಾ ಕೃಷಿಕ ವೃತ್ತಿಯಲ್ಲಿದ್ದುಕೊಂಡು ಹೊಸ ಆಯಾಮ ಸೃಷ್ಠಿಸಲು ಹೊರಟಿರುವದು ಶ್ಲಾಘನೀಯವಾಗಿದೆ ಸಮಾಜದ ಬಂದುಗಳು ರಾಬಿನಸಿಂಗ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಅಭಿನಂದಿಸುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು.
ಇದೇ ಸಮಯದಲ್ಲಿ ರಜಪೂತ ಸಮಾಜದ ವತಿಯಿಂದ ರಾಬಿನಸಿಂಗ್ ವಿಷ್ಣುಸಿಂಗ್ ಪರಿಹಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ರಜಪೂತ ಸಮಾಜದ ಶ್ರೀ ಅಂಬಾಭವಾನಿ ಮಂದಿರದಲ್ಲಿ ಮಹಿಳಾ ಮಂಡಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ರತನಸಿಂಗ್ ಕೊಕಟನೂರ, ವಿಜಯಸಿಂಗ್ ಹಜೇರಿ, ಸಿರಸಕುಮಾರ ಹಜೇರಿ, ಗೋವಿಂದಸಿಂಗ್ ಗೌಡಗೇರಿ, ವಿಠ್ಠಲಸಿಂಗ್ ಹಜೇರಿ, ಗಂಗು ಕೊಕಟನೂರ, ರಾಹುಲ್ ಮೂಲಿಮನಿ, ಸುನೀಲ್ ವಿಜಾಪೂರ, ಸೋಹನ್ ವಿಜಾಪೂರ, ಸಿತಾರಾಮ ಮೂಲಿಮನಿ, ಹರಿಷ ಮೂಲಿಮನಿ, ಅಲೌಕ ಗೌಡಗೇರಿ, ಪೃಥ್ವಿ ಹಜೇರಿ, ಸುನೀಲ ವಿಜಾಪೂರ, ಸಚೀನ ವಿಜಾಪೂರ, ಮೊದಲಾದವರು ಉಪಸ್ಥಿತರಿದ್ದರು.