ಗದಗ,ಜೂ8: ವಿಶ್ವ ಪರಿಸರ ದಿನ ನಿಮಿತ್ತ ಗದಗ-ಬೇಟಗೇರಿಯ ಸರ್ಕಾರಿ ಐ.ಟಿ.ಐ ವತಿಯಿಂದ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ಪರಿಸರ ಜಾಗೃತಿ ಮೂಡಿಸಲಾಯಿತು. ಸಂಸ್ಥೆಯ ಪ್ರಾಚಾರ್ಯರಾದ ಮಲ್ಲೂರ ಬಸವರಾಜ ಚಾಲನೆ ನೀಡಿದರು. ಐ.ಟಿ.ಐ ಕಲಿಯುತ್ತಿರುವ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಮಾಡದಂತೆ ಹಾಗೂ ಪರಿಸರ ಉಳಿವಿನಿಂದ ಭೂಮಿ ಮೇಲಿನ ಜೀವ ರಾಶಿಗಳ ಪ್ರಾಣ ಉಳಿಯಲಿದೆ ಪ್ರತಿಯೊಬ್ಬರೂ ಸಸಿ ನೆಡೋಣ ಎಂದು ಘೋಷಣೆ ಕೂಗಿದರು. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಬೆಟಗೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಸರದ ಮಹತ್ವವನ್ನು ಸಾರ್ವಜಿನಿಕರಲ್ಲಿ ಸಾರಿದರು. ಪರಿಸರ ದಿನಾಚರಣೆ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.