ಮಂಡ್ಯ: ಮಾ.27:- ಪರಿಸರ ಹಾಗೂ ಜಲ ಜಾಗೃತಿ ಬಗ್ಗೆ ನಾಗರೀಕರಿಗೆ ಅರಿವು ಅಗತ್ಯ ಎಂದು ಕಾವೇರಿ ನೀರಾವರಿ ನಿಗಮ ವಿಸಿ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರ ಹೆಚï.ಎಸï.ನಾಗರಾಜು ಹೇಳಿದರು.
ನಗರದ ಕುವೆಂಪುನಗರ ಉದ್ಯಾನವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ,ಪರಿಸರ ರೂರಲ್ ಡೆವಲೆಪ್‍ಮೆಂಟ್ ಸೊಸೈಟಿ (ರಿ ),ಯುವ ಮುನ್ನಡೆ, ಮಂಗಲ, ಮಧುರ ಮಂಡ್ಯ ಲಯ£್ಸï ಸಂಸ್ಥೆ, ಎನ್.ಎಸ್.ಎಸ್.ಘಟಕ (ಸ್ನಾತಕೋತ್ತರ) ಮಹಿಳಾ ಸರ್ಕಾರಿ ಕಾಲೇಜು ಇವರ ವತಿಯಿಂದ ವಿಶ್ವ ಅರಣ್ಯ ದಿನ – ವಿಶ್ವ ಜಲ ದಿನ 2023 ಅಂಗವಾಗಿ ಪರಿಸರ ನಡಿಗೆ, ಮಂಡ್ಯ ನಗರದಲ್ಲಿನ ಕಾವೇರಿ ಶಾಖಾ ನಾಲೆಯ 8ನೇ ವಿತರಣಾ ನಾಲೆಯಲ್ಲಿನ ಸ್ವಚ್ಚತೆ ಬಗ್ಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಪ್ಲಾಸ್ಟಿಕ್ ತ್ಯಜಿಸಬೇಕು ಬಟ್ಟೆ ಬ್ಯಾಗ್ ಬಳಸಬೇಕು ಎಂದು ನಾಗರಿಕರಿಗೆ ಬಟ್ಟೆ ಬ್ಯಾಗ್ ವಿತರಿಸಿ ಮುಂದಿನ ಪೀಳಿಗೆಗೆ ಪರಿಸರ ಉಳಿಸಿದರೆ ಅನುಕೂಲ ಆಗುತ್ತದೆ ಎಂದು ಅರಿವು ಮೂಡಿಸಿದರು.
ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಅಧ್ಯP್ಷÀ ಮಂಗಲ ಎಂ.ಯೋಗೀಶ್ ಮಾತನಾಡಿ ಪರಿಸರ ಅಸಮತೋಲನವು ವಿಶ್ವದ ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರP್ಷÀಣೆ ಹಾಗೂ ನೀರು, ಅರಣ್ಯ, ವಾಯು ಸಂರP್ಷÀಣೆಗೆ ಸಮುದಾಯವೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಅರಣ್ಯಗಳು ಮಣ್ಣಿನ ಸವೆತವನ್ನು ತಡೆಗಟ್ಟಲು ಮಣ್ಣನ್ನು ಸಮೃದ್ಧಗೊಳಿಸಲು ಮತ್ತು ಸಂರಕ್ಷಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾಡುಗಳ ನಾಶವು ಹವಾಗುಣ ಬದಲಾವಣೆಗೆ ಮುಖ್ಯ ಕಾರಣವಾಗಿದೆ.ಕೃಷಿಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ನಾವು ತಿನ್ನುವ ಆಹಾರದ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.ಆದುದರಿಂದ ಉಳಿದಿರುವ ಅರಣ್ಯಗಳನ್ನು ಸಂರಕ್ಷಿಸುವುದರ ಜೊತೆಗೆ ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಪೆÇೀಷಿಸಿ ಅರಣ್ಯೀಕರಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು
ಮಧುರ ಮಂಡ್ಯ ಲಯ£್ಸï ಸಂಸ್ಥೆ ಅಧ್ಯP್ಷÀ ಸಿ.ತ್ಯಾಗರಾಜು ಮಾತನಾಡಿ ಪ್ಲಾಸ್ಟಿಕ್ ಲೋಟದಲ್ಲಿ ಕಾಫಿ ಕುಡಿಯುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ತಂತ್ರe್ಞÁನದಿಂದ ತಿಳಿದು ಬಂದಿದೆ ಈ ನಿಟ್ಟಿನಲ್ಲಿ ನಾಗರಿಕರು ಪ್ಲಾಸ್ಟಿಕ್ ಹೋಗಲಾಡಿಸಲು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ನಾಗರಿಕರು ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ಹೋಗುವಾಗ ಬಟ್ಟೆ ಬಾಸ್ ತೆಗೆದುಕೊಂಡು ಹೋಗಬೇಕು ಪ್ಲಾಸ್ಟಿಕ್ ಬಳಸಬೇಡಿ ಎಂದು ಕುವೆಂಪು ನಗರ ಹಾಗೂ ಚಾಮುಂಡೇಶ್ವರಿ ನಗರದ ನಿವಾಸಿಗಳಿಗೆ ಪರಿಸರದ ಬಗ್ಗೆ ಜನಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರ ದೊಡ್ಡ ವೀರಯ್ಯ,ಕಿರಿಯ ಇಂಜಿನಿಯರ್ ಜಿ.ಎನ್.ಕೆಂಪರಾಜು, ಎನ್.ಎಸ್.ಎಸ್.ಜಿ¯್ಲÁ ಸಂಯೋಜನಾಧಿಕಾರಿ ಪೆÇ್ರ. ವೈ.ಕೆ.ಭಾಗ್ಯ,ಪರಿಸರ ರೂರಲ್ ಡೆವಲೆಪ್ ಮೆಂಟ್ ಸೊಸೈಟಿ ಕಾರ್ಯದರ್ಶಿ ಕೆ.ಪಿ. ಅರುಣಕುಮಾರಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂತೆ ಕಸಲಗೆರೆ ಬಸವರಾಜು ಮತ್ತು ತಂಡದವರಿಂದ ಪರಿಸರ ಸಂರP್ಷÀಣೆ ಕುರಿತು ಜಾಗೃತಿ ಗೀತೆಗಳನ್ನು ಹಾಡಿದರು. ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ವಿತರಿಸಲಾಯಿತು.